ಭಾವೈಕ್ಯದ ಸಂಕೇತ ಯಮನೂರು ಸ್ವಾಮಿ ಉರುಸು

hdl-1
ಹೂವಿನಹಡಗಲಿಯ ಯಮನೂರು ಸ್ವಾಮಿ (ಹಜರತ್ ರಾಜಬಾಗ್ ಸವಾರ) ಉರುಸು ಅಂಗವಾಗಿ ಗುರುವಾರ ಹಿಂದು-ಮುಸ್ಲಿಮರು ಪೂಜೆ ಸಲ್ಲಿಸಿದರು.
Published on

ಹೂವಿನಹಡಗಲಿ: ಪಟ್ಟಣದ ಯಮನೂರು ಸ್ವಾಮಿ(ಹಜರತ್ ರಾಜಬಾಗ್ ಸವಾರ) ಉರುಸು ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ಸಂಭ್ರಮದಿಂದ ಜರುಗಿತು.

ಬುಧವಾರ ಚಾಲನೆ ಪಡೆದ ಗಂಧ ಮಹೋತ್ಸವದ ಆಚರಣೆಯಲ್ಲಿ ಕೊಂಬಳಿ ಚೌಕಿಮಠದ ಗಾಡಿತಾತ, ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ, ರಾಮಸ್ವಾಮಿ ದೇವಸ್ಥಾನದ ಧರ್ಮಕರ್ತ ಡಾ.ರಾಕೇಶಯ್ಯ ರಾಮಸ್ವಾಮಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ದರ್ಗಾದಲ್ಲಿ ಹಿಂದು ಮತ್ತು ಮುಸ್ಲಿಂ ವಿಧಿವಿಧಾನಗಳ ಮೂಲಕ ವಿಶೇಷ ಪೂಜೆಗಳು ನೆರವೇರಿದವು.

ಬಳಿಕ ಮುಜಾವರ್ ವಂಶಸ್ಥರಿಂದ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ಹಳ್ಳದವರೆಗೆ ಮೆರವಣಿಗೆ ತೆರಳಿ, ಅಲ್ಲಿನ ನೀರು ತಂದು ಯಮನೂರುಸ್ವಾಮಿ ದರ್ಗಾ ಬಳಿ ಇರುವ ಗದ್ದುಗೆ ಹಣತೆಯಲ್ಲಿ ನೀರು ಮತ್ತು ಬತ್ತಿಯ ಮೂಲಕ ದೀಪ (ಗಂಧಮಹೋತ್ಸವ) ಬೆಳಗಿಸಿದರು. ಈ ಸನ್ನಿವೇಶವನ್ನು ಕಣ್ತುಂಬಿಕೊಳ್ಳಲು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು. ಗುರುವಾರ ಬೆಳಗಿನ ಜಾವದಿಂಲೇ ಹಿಂದು ಮತ್ತು ಮುಸ್ಲಿಂ ಬಾಂಧವರು ಏಕಕಾಲಕ್ಕೆ ಯಮನೂರು ಸ್ವಾಮಿ (ಹಜರತ್ ರಾಜಬಾಗ್ ಸವಾರ) ದರ್ಗಾಕ್ಕೆ ತೆರಳಿ ದೀರ್ಘದಂಡ ನಮಸ್ಕಾರ ಹಾಕಿದರು. ನಂತರ ಸಕ್ಕರೆ ಸಮರ್ಪಿಸಿದರು. ದರ್ಗಾದ ಆವರಣದಲ್ಲಿ ಭಕ್ತರು ಉಪ್ಪು, ಕೊಬ್ಬರಿ ಸುಡುವುದು, ಎತ್ತಿನ ಮೆರವಣಿಗೆ ಮೂಲಕ ಹರಕೆ ತೀರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net