ಲೋಕ ಅದಾಲತ್‌ನಲ್ಲಿ ಒಂದಾದ ದಂಪತಿ - ಜೀವನಾಂಶಕ್ಕೆ ಅರ್ಜಿ ಸಲ್ಲಿಸಿದ್ದ ಮಹಿಳೆಯರು

hdl-1
ಪತಿ ವಿರುದ್ಧ ಜೀವನಾಂಶಕ್ಕೆ ಅರ್ಜಿ ಸಲ್ಲಿಸಿದ್ದ ಮಹಿಳೆಯರು ಹೂವಿನಹಡಗಲಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಆಯೋಜಿಸಿದ್ದ ಲೋಕ ಅದಾಲತ್‌ನಲ್ಲಿ ಹೂಮಾಲೆ ಬದಲಿಸಿಕೊಂಡು ಒಂದಾದರು. ನ್ಯಾಯಾಧೀಶೆ ಅಕ್ಷತಾ ಟಿ, ವಕೀಲರಾದ ಎಸ್.ಶಿವಲಿಂಗಪ್ಪ, ಪಿ.ಎಂ.ಶಿವಕುಮಾರ, ಎಂ.ಎನ್.ಮಂಜುನಾಥ, ಎಚ್.ರುದ್ರಪ್ಪ ಇತರರಿದ್ದರು.
Published on

ಹೂವಿನಹಡಗಲಿ: ಪತಿಯ ವಿರುದ್ಧ ಜೀವನಾಂಶ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದ ಪ್ರತ್ಯೇಕ ಪ್ರಕರಣದ ಇಬ್ಬರು ಮಹಿಳೆಯರು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಲೋಕ ಅದಾಲತ್‌ನಲ್ಲಿ ಪತಿಯೊಂದಿಗೆ ಒಂದಾದರು.

ತಾಲೂಕಿನ ಬಸರಕೋಡುತಾಂಡಾದ ಸುಜಾತಾ, ಹರಪನಹಳ್ಳಿಯ ನಾಗರಾಜನಾಯ್ಕ ಅವರೊಂದಿಗೆ ಮದುವೆಯಾಗಿದ್ದರು. ಕೌಟುಂಬಿಕ ಕಲಹ ಹಿನ್ನೆಲೆ ಸುಜಾತಾ ತನ್ನ ಪತಿ ವಿರುದ್ಧ ಜೀವನಾಂಶ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರೆ, ಪಟ್ಟಣದ ಶಹನಾಜ್ ಎಂಬ ಮಹಿಳೆ ಪತಿ ಮುಬಾರಕ್ ವಿರುದ್ಧ ಜೀವನಾಂಶಕ್ಕಾಗಿ ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಧೀಶೆ ಅಕ್ಷತಾ ಟಿ. ಅವರು ಲೋಕ ಅದಾಲತ್‌ನಲ್ಲಿ ಎರಡೂ ಜೋಡಿಯ ಮನವೊಲಿಸುವಲ್ಲಿ ಯಶಸ್ಸಿಯಾಗಿದ್ದು, ದಂಪತಿ ಹೂಮಾಲೆ ಬದಲಿಸಿಕೊಂಡು ಒಂದಾದರು.

ಲೋಕ ಅದಾಲತ್‌ನಲ್ಲಿ ಒಟ್ಟು 707 ರಲ್ಲಿ 697 ಪ್ರಕರಣಗಳು ಇತ್ಯರ್ಥವಾದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net