ವೆಬ್‌ಕಾಸ್ಟಿಂಗ್ ನಿಗಾದಲ್ಲಿ ಪರೀಕ್ಷೆ ನಡೆಸಿ

hadagali Exam
ಹೂವಿನಹಡಗಲಿ ಜಿಪಿಜಿ ಪ್ರೌಢಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರೌಢಶಾಲಾ ಮುಖ್ಯಶಿಕ್ಷಕರ ಶೈಕ್ಷಣಿಕ ಪ್ರಗತಿ ಸಭೆಯಲ್ಲಿ ಬಿಇಒ ಮಹೇಶ್ ವಿ.ಪೂಜಾರ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಎ.ಕೋಟೆಪ್ಪ, ತಾಲೂಕು ದೈಹಿಕ ಶಿಕ್ಷಣ ಅಧೀಕ್ಷಕ ರಫೀಕ್ ಅಹಮದ್ ಖವಾಸ್ ಇತರರಿದ್ದರು.
Published on

ಹೂವಿನಹಡಗಲಿ: ಪ್ರಸಕ್ತ ಶೈಕ್ಷಣಿಕ ವರ್ಷ 8, 9 ಮತ್ತು 10ನೇ ತರಗತಿ ಎಸ್‌ಎ 1 ಮಧ್ಯವಾರ್ಷಿಕ ಪರೀಕ್ಷೆಯನ್ನು ವೆಬ್‌ಕಾಸ್ಟಿಂಗ್ ನಿಗಾದಲ್ಲಿಯೇ ನಡೆಸಬೇಕು ಎಂದು ಬಿಇಒ ಮಹೇಶ್ ವಿ.ಪೂಜಾರ ಹೇಳಿದರು.

ಪಟ್ಟಣದ ಜಿಪಿಜಿ ಪ್ರೌಢಶಾಲೆಯಲ್ಲಿ ಮಂಗಳವಾರ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಪ್ರೌಢಶಾಲಾ ಮುಖ್ಯಶಿಕ್ಷಕರ ಶೈಕ್ಷಣಿಕ ಪ್ರಗತಿ ಸಭೆಯಲ್ಲಿ ಮಾತನಾಡಿದರು. ಎಸ್‌ಎ1 ಪರೀಕ್ಷೆಗಳನ್ನು ಜಿಲ್ಲಾ ಹಂತದ ವೇಳಾಪಟ್ಟಿ ಅನ್ವಯ ನಡೆಸಬೇಕು.

ಎಸ್ಸೆಸ್ಸೆಲ್ಸಿ ಮಧ್ಯವಾರ್ಷಿಕ ಪರೀಕ್ಷೆಗೆ ಮಂಡಳಿಯಿಂದ ಶಾಲಾ ಲಾಗಿನ್‌ನಲ್ಲಿ ಪ್ರಶ್ನೆ ಪತ್ರಿಕೆಯು ಹಿಂದಿನ ದಿನ ಲಭ್ಯವಾಗುತ್ತದೆ. ಎಸ್‌ಎ1 ಪರೀಕ್ಷೆ ನಂತರ ಶಿಕ್ಷಕರು ನಿಗದಿತ ಸಮಯದೊಳಗೆ ಮೌಲ್ಯಮಾಪನ ಪೂರ್ಣಗೊಳಿಸಬೇಕು. ಬರವಣಿಗೆ ಕೌಶಲ ಹೆಚ್ಚಿಸಲು ಪ್ರತಿನಿತ್ಯ ಭಾಷಾ ವಿಷಯಗಳ ಪ್ರಬಂಧ ಪತ್ರ, ಪದ್ಯ, ವ್ಯಾಕರಣಾಂಶಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಎ.ಕೋಟೆಪ್ಪ, ತಾಲೂಕು ದೈಹಿಕ ಶಿಕ್ಷಣ ಅಧೀಕ್ಷಕ ರಫೀಕ್ ಅಹಮದ್ ಖವಾಸ್ ಮಾತನಾಡಿದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ.ಹನುಮಂತಪ್ಪ, ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಎಚ್.ಮಲ್ಲಿಕಾರ್ಜುನ, ಶಾಲೆಯ ಪ್ರಭಾರ ಉಪ ಪ್ರಾಚಾರ್ಯೆ ಕವಿತಾ ಗುಡೇಕೋಟೆ, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಂ.ಕಾಂತೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net