

ಹೂವಿನಹಡಗಲಿ: ತಂದೆ-ತಾಯಿ ಹಾಗೂ ಅಕ್ಷರ ಕಲಿಸಿದ ಗುರುವಿನ ಋಣವನ್ನು ಎಂದಿಗೂ ತೀರಸಲಾಗದು ಎಂದು ನಿವೃತ್ತ ಪ್ರಾಚಾರ್ಯ ಗುರುಬಸವರಾಜ ಹೇಳಿದರು.
ಹಿರೇಹಡಗಲಿಯ ವಿಕೆಕೆ ಸರ್ಕಾರಿ ಕಾಲೇಜು ಆವರಣದಲ್ಲಿ 2003ನೇ ಸಾಲಿನ ಎಸೆಸ್ಸೆಲ್ಸಿ ವಿದ್ಯಾರ್ಥಿಗಳು ಇತ್ತೀಚಿಗೆ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಂದೆ-ತಾಯಿ ಜನ್ಮ ನೀಡಿದರೆ, ಗುರುಗಳು ಅಕ್ಷರ ಕಲಿಸಿ ಜನ್ಮವನ್ನು ಹೇಗೆ ಸಾರ್ಥಗೊಳಿಸಿಕೊಳ್ಳಬೇಕು ಎಂಬುದನ್ನು ತಿಳಿಸುತ್ತಾರೆ.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಕುಟುಂಬದ ಪಾತ್ರ ಹೇಗಿದೆಯೋ ಹಾಗೆಯೇ ಮಕ್ಕಳಿಗೆ ಸಂಸ್ಕಾರ, ಸದ್ಗುಣಗಳನ್ನು ಕಲಿಸುವ ಮೂಲಕ ಉತ್ತಮ ಪ್ರಜೆಗಳನ್ನಾಗಿಸುವ ಹೊಣೆ ಶಿಕ್ಷಕರದು ಎಂದರು.
ಪ್ರಾಚಾರ್ಯ ರೇವಣಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಜಗದೀಶ, ನಿವೃತ್ತ ಪ್ರಾಚಾರ್ಯ ಸೋಮಶೇಖರ, ನಿವೃತ್ತ ಶಿಕ್ಷಕ ತ್ರಯಂಬಕ ಶಾಸ್ತ್ರಿ, ಪ್ರಮುಖರಾದ ವೀರಭದ್ರಪ್ಪ, ಚರಣ ಗುಂಡಿ, ಬಸವರಾಜ, ಚಂದ್ರಶೇಖರ, ಗಾಯತ್ರಿ, ಮುಸ್ತಫಾ ಇತರರಿದ್ದರು.