ಮೈಲಾರ ಗ್ರಾಮದಲ್ಲಿ ದಾಖಲೆ ಇಲ್ಲದ 2.50 ಲಕ್ಷ ರೂ ವಶಕ್ಕೆ

cash_seizure_750x500
Published on

ಹೂವಿನಹಡಗಲಿ: ತಾಲೂಕಿನ ಮೈಲಾರ ಗ್ರಾಮದ ಚೆಕ್‌ಪೋಸ್ಟ್ ಬಳಿ ದಾಖಲೆ ಇಲ್ಲದ 2.50 ಲಕ್ಷ ರೂ.ಗಳನ್ನು ಎಸ್‌ಎಸ್‌ಟಿ ತಂಡ ಶನಿವಾರ ವಶಪಡಿಸಿಕೊಂಡಿದೆ. ಹಾವೇರಿ ಜಿಲ್ಲೆಯ ಗುತ್ತಲ ಕಡೆಯಿಂದ ಬಂದ ಕಾರನ್ನು ತಡೆದು ತಪಾಸಣೆ ಮಾಡಿದಾಗ ಕಾರಿನಲ್ಲಿ 2.50 ಲಕ್ಷ ರೂ. ಪತ್ತೆಯಾಗಿದೆ.

ಇದರ ಬಗ್ಗೆ ಕಾರಿನಲ್ಲಿದ್ದ ಮಹಾದೇವಪ್ಪ ಎಂಬುವರನ್ನು ಕೇಳಿದಾಗ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಮಡ್ಲೂರು ಗ್ರಾಮ ದಿಂದ ತಾಲೂಕಿನ ಮಾಗಳ ಗ್ರಾಮದ ಹುಸೇನ್ ಸಾಬ್ ಕಾಲಿಬಾಯಿ ಎಂಬುವರಿಗೆ 2.50 ಲಕ್ಷ ರೂ. ನೀಡಲು ಹೋಗುತ್ತಿದ್ದಾಗಿ ಹೇಳಿದ್ದಾರೆ. ಆದರೆ, ಈ ಹಣಕ್ಕೆ ಸೂಕ್ತ ದಾಖಲೆ ನೀಡದ ಕಾರಣ ಎಸ್‌ಎಸ್‌ಟಿ ತಂಡದ ಮುಖ್ಯಸ್ಥ ವಾಸುದೇವ ಹಾಗೂ ತಂಡದ ಸಿಬ್ಬಂದಿ ಹಣ ವಶಕ್ಕೆ ಪಡೆದು ಚುನಾವಣಾಧಿಕಾರಿ ಶರಣಪ್ಪ ಮುದಗಲ್ ಅವರ ಮೂಲಕ ಉಪಖಜಾನೆಗೆ ಹಣ ರವಾನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net