ಒಗ್ಗಟ್ಟಿನಿಂದ ಚುನಾವಣೆ ಎದುರಿಸೋಣ - ಮಾಜಿ ಶಾಸಕ ಬಿ.ಚಂದ್ರನಾಯ್ಕ ಸಲಹೆ

B Chandra nayak Hadagali
ಬಿಜೆಪಿ ಮಾಜಿ ಶಾಸಕ ಬಿ.ಚಂದ್ರನಾಯ್ಕ
Published on

ಹೂವಿನಹಡಗಲಿ: ಪಕ್ಷ ಘೋಷಣೆ ಮಾಡಿದ ಅಭ್ಯರ್ಥಿಯನ್ನು ಒಮ್ಮತದಿಂದ ಚುನಾವಣೆ ಎದುರಿಸುವ ಮೂಲಕ ಗೆಲ್ಲಿಸೋಣ ಎಂದು ಬಿಜೆಪಿ ಮಾಜಿ ಶಾಸಕ ಬಿ.ಚಂದ್ರನಾಯ್ಕ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಅಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೆಜೆಪಿ ಹಾಗೂ ಇನ್ನೊಬ್ಬ ನಾಯಕ ಬಿಎಸ್‌ಆರ್ ಪಕ್ಷ ಕಟ್ಟುವ ಮೂಲಕ ನಮ್ಮ ನಾಯಕರುಗಳಿಂದಲೇ ನಾನು ಚುನಾವಣೆಯಲ್ಲಿ ಸೋತಿದ್ದೆ. ಜನರು ನನ್ನನ್ನು ಸೋಲಿಸಿರಲಿಲ್ಲ ಎಂದರು.

ಬಿಜೆಪಿ ಮುಖಂಡ ಓದೋ ಗಂಗಪ್ಪ ಮಾತನಾಡಿ, ಜಗತ್ತಿನಲ್ಲಿ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದ ಬಿಜೆಪಿ ಪಕ್ಷದ ನಾಯಕರು ಯಾವುದೇ ನಿರ್ಧಾರ ತೆಗೆದು ಕೊಂಡರೂ ಅದು ನಮ್ಮೆಲ್ಲರ ಒಳಿತಿಗಾಗಿ ಆಗಿರುತ್ತದೆ ಅದಕ್ಕಾಗಿ ಯಾರೂ ವಿಚಲಿತರಾಗಬಾರದು ಎಂದರು. ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕ ಮಾತನಾಡಿದರು.

ಕ್ಷೇತ್ರ ಪ್ರಭಾರ ಪ್ರವೀಣ್, ಮಂಡಲ ಅಧ್ಯಕ್ಷ ಸಂಜೀವ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಂ.ಬಿ.ಬಸವರಾಜ, ರಾಘವೇಂದ್ರ, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಈಟಿ ಲಿಂಗರಾಜ್, ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಸುಭಾಶ್, ಶಕ್ತಿ ಕೇಂದ್ರ ಅಧ್ಯಕ್ಷ ರಾಮಮೂರ್ತಿ, ಎಸ್ಸಿ ಮೋರ್ಚಾ ಶಂಕರ್, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಜಿಲ್ಲಾ ಉಪಾಧ್ಯಕ್ಷ ಪಿ.ವಿಜಯಕುಮಾರ್, ಮುಖಂಡರಾದ ಶಿವಪುರ ಸುರೇಶ್, ಪರಮೇಶ್ವರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net