ವಿವೇಚನೆ ಹೆಚ್ಚಿಸುವ ನಾಟಕಗಳು

Huvinahadagali drama
ಹೂವಿನಹಡಗಲಿ ಜಿಬಿಆರ್ ಕಾಲೇಜಿನ ಬಯಲು ರಂಗ ಮಂದಿರದಲ್ಲಿ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ ಪ್ರದರ್ಶನದಲ್ಲಿ ಸಿದ್ದಪ್ಪ ಮಾದರ, ಮಂಜುನಾಥ ವನಕೇರಿ, ಪಂಪನಗೌಡ ಸಿಂಧನೂರು, ಹನುಮಂತ ನಾಯ್ಕರ್, ಸಂಭ್ರಮ ಸೊನ್ನದ ಅಭಿನಯಿಸಿದರು.
Published on

ಹೂವಿನಹಡಗಲಿ: ಜೀವನದ ಸನ್ನಿವೇಶಗಳನ್ನು ರಂಗದ ಮೇಲೆ ಪ್ರದರ್ಶಿಸುವ ಮೂಲಕ ನಾಟಕಗಳು ಮೌಲ್ಯಗಳನ್ನು ತಿಳಿಸುತ್ತವೆ ಎಂದು ತಾಪಂ ಇಒ ಉಮೇಶ್ ಮೈನಹಳ್ಳಿ ಹೇಳಿದರು.

ಪಟ್ಟಣದ ಬಿಜಿಆರ್ ಕಾಲೇಜಿನಲ್ಲಿ ಸರ್ಕಾರಿ ನೌಕರರ ಸಂಘ, ರಂಗ ಒಕ್ಕಲು ಮತ್ತು ಸ್ವರದೇಶಿ ಸಂಸ್ಥೆ ಸಹಯೋಗದೊಂದಿಗೆ ಗುರುವಾರ ಏರ್ಪಡಿಸಿದ್ದ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಮನಸ್ಸಿಗೆ ಮುದ ನೀಡುವ ಹಾಗೂ ವಿವೇಚನೆ ಹೆಚ್ಚಿಸುವ ಕೆಲಸ ನಾಟಕಗಳು ಮಾಡುತ್ತವೆ. ಒತ್ತಡದ ಬದುಕಿನಲ್ಲಿ ಕಲೆ ಮತ್ತು ಸಂಸ್ಕೃತಿ ಕಡೆಗೆ ಗಮನ ಕಡಿಮೆಯಾಗುತ್ತಿದೆ ಎಂದರು.

ನಾಟಕದ ನಿರ್ದೇಶಕ ಶಕೀಲ್ ಅಹ್ಮದ್ ಹಾಗೂ ರಂಗಕರ್ಮಿ ಚ.ಅಜಯ ಅವರು ಉತ್ತರ ಕರ್ನಾಟಕದ ರಂಗಭೂಮಿ ವಿಷಯದ ಕುರಿತು ಮಾತನಾಡಿದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ.ಮೋಹನ್ ರೆಡ್ಡಿ, ಪ್ರಾಚಾರ್ಯ ಎಸ್.ಎಸ್.ಪಾಟೀಲ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಪಿ.ಎಂ.ಅಶೋಕ, ಗೌರವಾಧ್ಯಕ್ಷ ಎ.ಕೊಟ್ರಗೌಡ, ಖಜಾಂಚಿ ಡಿ.ವೀರಣ್ಣ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net