ಒಂದು ತಿಂಗಳು ಲಾಕ್‌ಡೌನ್ ಮಾಡಿ, ಭಾರತೀಯ ಸರ್ವಧರ್ಮ ರಕ್ಷಣಾ ವೇದಿಕೆ ಒತ್ತಾಯ

06072020 Hadagali Appeal
Published on

ತಹಸೀಲ್ದಾರ್ ವಿಜಯಕುಮಾರ್‌ಗೆ ಮನವಿ

ಹೂವಿನಹಡಗಲಿ: ರಾಜ್ಯವನ್ನು ಒಂದು ತಿಂಗಳು ಲಾಕ್‌ಡೌನ್ ಮಾಡುವಂತೆ ಆಗ್ರಹಿಸಿ ಭಾರತೀಯ ಸರ್ವಧರ್ಮ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಸೋಮವಾರ ತಹಸೀಲ್ದಾರ್ ಕೆ.ವಿಜಯಕುಮಾರ್ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಮನವಿ ಸಲ್ಲಿಸಿತು.

ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆ, ವೆಂಟಿಲೇಟರ್ ಕೊರತೆ ಉಲ್ಬಣಗೊಂಡಿದೆ. ಸಾವಿನ ಪ್ರಕರಣಗಳು ಅಧಿಕವಾಗುತ್ತಿದ್ದು, ಸಾಮಾನ್ಯ ಜನರಲ್ಲಿ ಆತಂಕ ಶುರುವಾಗಿದೆ. ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡರೂ ಸರಿಯಾಗಿ ಪಾಲನೆಯಾಗುತ್ತಿಲ್ಲ. ಬೇರೆ ರಾಜ್ಯಗಳು ಈಗಾಗಲೇ ಲಾಕ್‌ಡೌನ್ ಘೋಷಣೆ ಮಾಡಿದ್ದು, ರಾಜ್ಯ ಸರ್ಕಾರ ಜೀವ ನಂತರ ಜೀವನ ಎಂಬ ಉದ್ದೇಶದ ಅನ್ವಯ ಕನಿಷ್ಠ ಒಂದು ತಿಂಗಳ ರಾಜ್ಯವನ್ನು ಲಾಕ್‌ಡೌನ್ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ವೇದಿಕೆ ಜಿಲ್ಲಾ ಅಧ್ಯಕ್ಷ ಬಿಚ್ಚುಗತ್ತಿ ಖಾಜಾಹುಸೇನ್. ಸದಸ್ಯರಾದ ದಯಾನಂದ ಎಂ.ನಾಗಭೂಷಣ. ಅಲ್ಲಾವಲಿಸಾಬ್, ಬಾಬಾಸಾಬ್, ತಂಬ್ರಹಳ್ಳಿ ಭಕ್ಷಿಸಾಬ್, ಫೋಟೊ ಶೇಖರ್, ರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net