ತಳಕಲ್ಲು ಕೆರೆಗೆ ನೀರು ಹರಿಸಿ: ಹೊಸಪೇಟೆಯಲ್ಲಿ ಸಚಿವ ಆನಂದ ಸಿಂಗ್‌ಗೆ ಹೋರಾಟ ಸಮಿತಿ ಮನವಿ

11092021 Hadagali news
Published on

ಹೂವಿನಹಡಗಲಿ: ತಾಲೂಕಿನ ತಳಕಲ್ಲು ಕರೆಗೆ ಸಿಂಗಟಾಲೂರು ಯೋಜನೆಯಿಂದ ನೀರು ಬಿಡುವಂತೆ ಆಗ್ರಹಿಸಿ ಹೋರಾಟ ಸಮಿತಿ ಶನಿವಾರ ಹೊಸಪೇಟೆಯಲ್ಲಿ ಸಚಿವ ಆನಂದ ಸಿಂಗ್‌ಗೆ ಮನವಿ ಸಲ್ಲಿಸಲಾಯಿತು.

ಸಮಿತಿ ಅಧ್ಯಕ್ಷೆ ಎಂ.ಪಿ.ಸುಮಾ ವಿಜಯ ಮಾತನಾಡಿ, 12 ವರ್ಷಗಳಿಂದ ತಾಲೂಕಿನ ಕೆರೆಗಳಿಗೆ ತುಂಗಭದ್ರಾ ನದಿಯಿಂದ ಕಾಲುವೆ ಮೂಲಕ ನೀರು ತುಂಬಿಸಲಾಗುತ್ತಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷೃದಿಂದ ತಳಕಲ್ಲು ಕೆರೆಗೆ ನೀರು ಹರಿಸುತ್ತಿಲ್ಲ. ಈ ಕೆರೆ ತುಂಬಿಸುವುದರಿಂದ ಮಹಾಜನದಹಳ್ಳಿ, ತಳಕಲ್ಲು, ಕನ್ನಿಹಳ್ಳಿ, ಇಟ್ಟಗಿ, ಮಲ್ಲಹಳ್ಳಿ ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ. ಜಮೀನುಗಳಲ್ಲಿ ಅಂತರ್ಜಲವೂ ಹೆಚ್ಚಲಿದೆ. ಕೂಡಲೇ ಕೆರೆಗೆ ನೀರು ಬಿಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.

ಮುನಿರಾಬಾದ್ ನೀರಾವರಿ ಇಲಾಖೆಯ ಮುಖ್ಯ ಇಂಜಿನಿಯರ್‌ಗೆ ಕರೆ ಮಾಡಿದ ಸಚಿವ ಆನಂದ ಸಿಂಗ್, ಸೋಮವಾರ ತಳಕಲ್ಲು ಗ್ರಾಮಕ್ಕೆ ಭೇಟಿ ನೀಡಿ ರೈತರೊಂದಿಗೆ ಕೆರೆ ಪರಿಶೀಲನೆ ಮಾಡಿ, 15 ದಿನಗಳೊಳಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ ಅವರು, ಕೆರೆ ತುಂಬಿಸುವ ಭರವಸೆ ನೀಡಿದರು.

ನಿವೃತ್ತ ಇಂಜಿನಿಯರ್ ಓದೋ ಗಂಗಪ್ಪ, ಇಟ್ಟಿಗಿ ಗ್ರಾಪಂ ಅಧ್ಯಕ್ಷೆ ಪುಷ್ಪ ಶಿವಕುಮಾರ್, ಉಪಾಧ್ಯಕ್ಷ ಸಿದ್ದಪ್ಪ, ಪ್ರಮುಖರಾದ ಕ್ಯಾತನರ ಶಿವಮೂರ್ತಿ, ನಾಗರಾಜ್, ಕುಂಚೂರು ಸತೀಶ, ತಿಗರಿ ನಾಗರಾಜ್, ಷಡಕ್ಷರಿ, ಕೆಂಚಮನಹಳ್ಳಿ ಮಲ್ಲಪ್ಪ, ವೀರೇಶ, ಗಿರಿರಾಜ್, ಪ್ರಭಾಕರ, ಚನ್ನಬಸಪ್ಪ, ಕೊಟ್ರೇಶ, ಗುತ್ತಲ ಪ್ರಭಾಕರ. ಡಿ.ಮಲ್ಲಪ್ಪ, ವಿ.ನಾಗರಾಜ್ ರಾಮನಗೌಡ, ಉತ್ತಂಗಿ ದಯಾನಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net