ಸಿಂಗಟಾಲೂರು ಕಾಲುವೆಗೆ ನೀರು ಬಿಡಿ

HuvinaHadagali formers protest
ಹೂವಿನಹಡಗಲಿಯ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಚೇರಿಗೆ ಬೀಗ ಜಡಿದು ರೈತರು ಪ್ರತಿಭಟನೆ ನಡೆಸಿದರು. ರೈತರಾದ ನಾರಾಯಣರೆಡ್ಡಿ, ಕೋಟೆಪ್ಪ, ಶಂಕ್ರಪ್ಪ, ಭೀಮಣ್ಣ, ಶ್ರೀಧರಪ್ಪ, ಹಾಲೇಶ್‌ನಾಯ್ಕ, ಗಣೇಶ್‌ನಾಯ್ಕ ಇತರರಿದ್ದರು.
Published on

ನೀರಾವರಿ ಕಚೇರಿಗೆ ಮುತ್ತಿಗೆ ಹಾಕಿ ಕೃಷಿಕರ ಪ್ರತಿಭಟನೆ

ಹೂವಿನಹಡಗಲಿ : ತಾಲೂಕಿನ ಮಾಗಳ, ಹಿರೇಹಡಗಲಿ, ಹಗರನೂರು, ವಡ್ಡಿನಹಳ್ಳಿ ತಾಂಡಾ, ಕೆ.ಐಯನಹಳ್ಳಿ ಗ್ರಾಮಗಳಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಕಾಲುವೆಗೆ ನೀರು ಹರಿಸಲು ಒತ್ತಾಯಿಸಿ ಪಟ್ಟಣದ ನೀರಾವರಿ ಯೋಜನೆಯ ಕಚೇರಿಗೆ ಸೋಮವಾರ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ತಾಲೂಕಿನ ಮಾಗಳ ಗ್ರಾಮದಲ್ಲಿರುವ ಕಾಲುವೆಗೆ ಸುಮಾರು 5 ವರ್ಷದಿಂದಲೂ ನೀರು ಹರಿಯುತ್ತಿಲ್ಲ. ಈಗಾಗಲೇ ನೀರಾವರಿ ಯೋಜನೆಯ ಹಳೆಯ ಪೈಪ್‌ಗಳನ್ನು ತೆಗೆದು ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಹೊಸ ಪೈಪ್‌ಗಳನ್ನು ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದೆ. ಇಲ್ಲಿಯವರೆಗೂ ಕಾಲುವೆಗಳಿಗೆ ನೀರು ಹರಿಸುತ್ತಿಲ್ಲ ಎಂದು ರೈತರು ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಅಗಮಿಸಿದ ಕಾರ್ಯಪಾಲಕ ಇಂಜಿನಿಯರ್ ಶಿವಮೂರ್ತಿ ಅವರು ಇನ್ನು 5 ದಿನದೊಳಗಾಗಿ ಕಾಲುವೆಗೆ ನೀರು ಹರಿಸುವುದಾಗಿ ಭರವಸೆ ನೀಡಿದರು. ಬಳಿಕ ರೈತರು ಪ್ರತಿಭಟನೆಯನ್ನು ಹಿಂಪಡೆದರು.

ಕಾಲುವೆಗೆ ನೀರು ಹರಿಸುವ ಜಾಕ್‌ವಾಲ್‌ಗಳಲ್ಲಿನ ಮೋಟಾರುಗಳು ದುಸ್ತಿರಗೊಂಡಿವೆ. ಕೂಡಲೇ ರಿಪೇರಿ ಮಾಡಿಸಬೇಕು. ಕಾಲುವೆಗೆ ನೀರು ಹರಿಸಿದರೆ ಸುಮಾರು 5 ಸಾವಿರ ಎಕರೆ ಪ್ರದೇಶ ಜಮೀನುಗಳಿಗೆ ಅನುಕೂಲವಾಗುತ್ತದೆ. 5 ದಿನದೊಳಗಾಗಿ ನೀರು ಹರಿಸದಿದ್ದರೆ ಪುನಹ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.

ರೈತರಾದ ನಾರಾಯಣರೆಡ್ಡಿ, ಕೋಟೆಪ್ಪ, ಶಂಕ್ರಪ್ಪ, ಭೀಮಣ್ಣ, ಶ್ರೀಧರಪ್ಪ, ಹಾಲೇಶ್‌ನಾಯ್ಕ, ಗಣೇಶ್‌ನಾಯ್ಕ, ರುದ್ರಾನಾಯ್ಕ, ಸೋಮಣ್ಣ, ಸುರೇಶ್‌ನಾಯ್ಕ, ನಾಗರಾಜ, ಮಲ್ಲೇಶ್, ಲಿಂಗಪ್ಪ ಇತರರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net