ಹಾಲಿನ ದರ ಇಳಿಕೆಗೆ ವಿರೋಧ

Hadagali protest by milk producers
ಮಾನ್ಯರಮಸಲವಾಡ ಗ್ರಾಮದಲ್ಲಿ ಹಾಲು ಉತ್ಪಾದಕರು ಮಂಗಳವಾರ ಪ್ರತಿಭಟನೆ ನಡೆಸಿದರು. ಪ್ರಮುಖರಾದ ನಾಗರಾಜ, ಅಕ್ಕಮ್ಮ, ಮಲ್ಲಿಕಾರ್ಜುನ, ನಾಗಲಿಂಗಪ್ಪ, ಚನ್ನವೀರಯ್ಯ, ಬಸಯ್ಯ, ಭೀಮಪ್ಪ, ಗಣೇಶ, ಮಂಜುನಾಥ ಇತರರಿದ್ದರು.
Published on

ಹೂವಿನಹಡಗಲಿ: ರಾಬಕೊವಿ ಒಕ್ಕೂಟದಿಂದ ಹಾಲಿನ ದರ ಇಳಿಕೆ ಮಾಡಿದ್ದನ್ನು ಖಂಡಿಸಿ ಮಾನ್ಯರ ಮಸಲವಾಡದಲ್ಲಿ ಹಾಲು ಉತ್ಪಾದಕರ ಸಂಘದ ಮುಂಭಾಗ ಮಂಗಳವಾರ ಹಾಲು ಉತ್ಪಾದಕರು ಹಾಲಿನ ಕ್ಯಾನ್‌ಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ರಾಬಕೊವಿ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಹಾಲು ಉತ್ಪಾದನೆ ಆಗುತ್ತಿದೆ. ಈ ಭಾಗದ ಅನೇಕರು ಹಾಲು ಉತ್ಪಾದನೆಯಿಂದಲೇ ಜೀವನ ನಡೆಸುತ್ತಿದ್ದಾರೆ. ಕಳೆದ ವರ್ಷದ ಬರಗಾಲದಲ್ಲಿ ಮೇವು ಇಲ್ಲದೆ ಸಾಕಷ್ಟು ತೊಂದರೆಗೆ ಸಿಲುಕಿದ್ದ ಹಾಲು ಉತ್ಪಾದಕರು ಜಾನುವಾರುಗಳನ್ನು ಮಾರಾಟ ಮಾಡಿದ್ದರು. ಈ ವರ್ಷ ಮಳೆ ಪ್ರಮಾಣ ಹೆಚ್ಚಾಗಿ ಹಸಿರು ಹುಲ್ಲು ಚನ್ನಾಗಿ ದೊರೆಯುತ್ತಿದೆ. ಹಾಲು ಉತ್ಪಾದಕರು ಮತ್ತಷ್ಟು ಆಕಳುಗಳನ್ನು ಖರೀದಿಸಿ ಅವುಗಳ ಸಾಕಣೆಯಿಂದ ಜೀವನ ನಡೆಸುತ್ತಿದ್ದಾರೆ. ಈಗ ಹಾಲಿನ ದರ ಇಳಿಕೆ ಮಾಡಿರುವುದರಿಂದ ಉತ್ಪಾದಕರಿಗೆ ನಷ್ಟವಾಗಲಿದೆ. ಕೂಡಲೇ ಹಾಲಿನ ದರ ಹೆಚ್ಚಿಸುವಂತೆ ಹಾಲು ಉತ್ಪಾದಕರು ಒತ್ತಾಯಿಸಿದರು. ಪ್ರಮುಖರಾದ ನಾಗರಾಜ, ಅಕ್ಕಮ್ಮ, ಮಲ್ಲಿಕಾರ್ಜುನ, ನಾಗ ಲಿಂಗಪ್ಪ, ಚನ್ನವೀರಯ್ಯ, ಬಸಯ್ಯ, ಭೀಮಪ್ಪ, ಗಣೇಶ, ಮಂಜುನಾಥ, ಕೊಟ್ರೇಶ, ಮಲ್ಲಪ್ಪ, ಜಯಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net