ಭಾರಿ ಗಾತ್ರದ ಮೊಸಳೆ ಸೆರೆ

24-feb-hdl-02
Published on

ಹೂವಿನಹಡಗಲಿ: ತಾಲೂಕಿನ ರಾಜವಾಳ ಗ್ರಾಮದ ಭತ್ತದ ಗದ್ದೆಯಲ್ಲಿ ಕಾಣಿಸಿಕೊಂಡಿದ್ದ ಭಾರಿ ಗಾತ್ರದ ಮೊಸಳೆಯನ್ನು ಗ್ರಾಮಸ್ಥರ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.
ಒಂದು ಗಂಟೆ ಕಾರ್ಯಚರಣೆ ನಡೆಸಿದ ಬಳಿಕ ಮೊಸಳೆಯನ್ನು ಸುರಕ್ಷಿತವಾಗಿ ಸೆರೆಹಿಡಿದು, ಹಗ್ಗದಂದ ಕಟ್ಟಿ, ನಂತರ ನದಿಗೆ ಬಿಡಲಾಗಿದೆ.

ಗ್ರಾಮಕ್ಕೆ ಹತ್ತಿರದಲ್ಲಿ ತುಂಗಾಭದ್ರಾ ನದಿ ಇದೆ. ನದಿಯಿಂದ ಹೊರ ಬಂದ ಮೊಸಳೆ ಸಮೀಪದ ಭತ್ತದ ಗದ್ದೆಗೆ ನುಗ್ಗಿದೆ. ಅಲ್ಲೇ ಓಡಾಡುತ್ತಿರುವ ಮೊಸಳೆಯನ್ನು ಕಂಡ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ನಂತರ ನಮ್ಮ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರ ಸಹಾಯದಿಂದಲೇ ಅದನ್ನು ಸೆರೆಹಿಡಿದು ಮತ್ತೆ ನದಿಗೆ ಬಿಡಲಾಗಿದೆ ಎಂದು ಅರಣ್ಯಾಧಿಕಾರಿ ಶಿವಕುಮಾರ್ ಶುಕ್ರವಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net