ಮಳೆಗಾಗಿ ಪ್ರಾರ್ಥಿಸಿ ಕತ್ತೆಗಳ ಮದುವೆ

Hadagali Donkey
ಹೊಳಗುಂದಿ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರು ಕತ್ತೆಗಳ ಮದುವೆ ಮಾಡಿ ಮೆರವಣಿಗೆ ನಡೆಸಿರು. ವಿಪ್ರಮುಖರಾದ ಕಡ್ಲಿ ಕೊಟ್ರಪ್ಪ, ಹಳೆಮಟ್ಟಿ ವೀರೇಶ, ವೀರಭದ್ರೇಶ, ಗುರು ಬಸವರಾಜ, ಸಿದ್ದೇಶ ಇತರರಿದ್ದರು.
Published on

ಹೂವಿನಹಡಗಲಿ: ಮಳೆಗಾಗಿ ಪ್ರಾರ್ಥಿಸಿ ತಾಲೂಕಿನ ಹೊಳಗುಂದಿ ಗ್ರಾಮಸ್ಥರು ಶುಕ್ರವಾರ ಶ್ರೀ ಸಿದ್ಧೇಶ್ವರ ದೇವಸ್ಥಾನದಲ್ಲಿ ಕತ್ತೆಗಳ ಮದುವೆ ಮಾಡಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.

ಸಿದ್ಧೇಶ್ವರ ದೇವಸ್ಥಾನದ ಬಳಿ ಹೆಣ್ಣು ಮತ್ತು ಗಂಡು ಕತ್ತೆಗೆ ಸ್ನಾನ ಮಾಡಿಸಿ ಅರಿಶಿಣ ಹಚ್ಚಿ, ಬಾಸಿಂಗ ಕಟ್ಟಿ ಸಂಪ್ರದಾಯದಂತೆ ಮಾಂಗಲ್ಯ ಕಟ್ಟಿಸಿ ಅಕ್ಷತೆ ಹಾಕಿ ಆರತಿ ಬೆಳಗಲಾಯಿತು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕತ್ತೆಗಳನ್ನು ಮೆರವಣಿಗೆ ಮಾಡಲಾಯಿತು.

ವಿಘ್ನೇಶ್ವರ ಯುವಕ ಸಂಘದ ಅಧ್ಯಕ್ಷ ಕಡ್ಲಿ ಕೊಟ್ರಪ್ಪ ಮಾತನಾಡಿ, ಬಿತ್ತನೆ ಮಾಡಿದ ರೈತರು ಮಳೆಗಾಗಿ ಕಾದಿದ್ದಾರೆ. ಆಗಸ್ಟ್ ಅರ್ಧ ತಿಂಗಳು ಮುಗಿದರೂ ಸರಿಯಾದ ಮಳೆ ಆಗಿಲ್ಲ. ಹೀಗಾಗಿ ಸಂಪ್ರದಾಯದಂತೆ ಕತ್ತೆಗಳಿಗೆ ಮದುವೆ ಮಾಡಿ ಮಳೆಗಾಗಿ ಪ್ರಾರ್ಥಿಸಿದ್ದೇವೆ ಎಂದು ತಿಳಿಸಿದರು.

ಗ್ರಾಮಸ್ಥರಾದ ಕರಿಬಸಪ್ಪ, ಸಿದ್ಧಲಿಂಗನ ಗೌಡ, ಹಳೆಮಟ್ಟಿ ವೀರೇಶ, ವೀರಭದ್ರೇಶ, ಗುರುಬಸವರಾಜ, ಸಿದ್ದೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net