ಬಾಕಿ ವೇತನ ಪಾವತಿ, ಸೇವಾ ಭದ್ರತೆಗೆ ಅತಿಥಿ ಉಪನ್ಯಾಸಕರ ಒತ್ತಾಯ: ಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕಗೆ ಮನವಿ

20092020 Huvinahadagali PT Parameshwara Nayak
Published on

ಹೂವಿನಹಡಗಲಿ: ಸೇವಾ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿ ತಾಲೂಕು ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ಭಾನುವಾರ ಶಾಸಕ ಪಿ.ಟಿ.ಪರಮೇಶ್ವರನಾಯ್ಕಗೆ ಮನವಿ ಸಲ್ಲಿಸಿತು.

ಕರೊನಾದಿಂದ ಅತಿಥಿ ಉಪನ್ಯಾಸಕರು ಸಂಕಷ್ಟದಲ್ಲಿದ್ದು, ಕೂಡಲೇ ಬಾಕಿ ವೇತನ ಸರ್ಕಾರ ನೀಡಬೇಕು. ಈ ಶೈಕ್ಷಣಿಕ ವರ್ಷಕ್ಕೆ ಆರ್ಥಿಕ ಮಿತವ್ಯಯ ನೆಪದಲ್ಲಿ ಅತಿಥಿ ಉಪನ್ಯಾಸಕರನ್ನು ಕೈಬಿಡುವ ಮಾತು ಕೇಳಿ ಬರುತ್ತಿದೆ. ಹಾಗೆ ಮಾಡದೆ ಸೇವೆಯಲ್ಲಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಎಐಡಿವೈಒ ಸಂಘಟನೆ ತಾಲೂಕು ಸಂಚಾಲಕ ಉಮೇಶ, ಅತಿಥಿ ಉಪನ್ಯಾಸಕರಾದ ಬಡಿಗೇರ ಶಿವಾನಂದ, ಮಹೇಶ ಭಟ್, ಸಂಪತ್, ಎ.ಕೆ.ನಾಗರಾಜ್, ರಾಕೇಶ, ನಾಗವೇಣಿ, ಶರಿಂತಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net