ಬೆಲೆ ಕುಸಿತ ಜಮೀನಿನಲ್ಲೇ ಉಳಿದ ಈರುಳ್ಳಿ

Hdl-1
ಈರಳ್ಳಿ ಬೆಲೆ ಕುಸಿತ ಕಾರಣ ಹೂವಿನಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ಫಸಲನ್ನು ಕಟಾವು ಮಾಡಿ ಜಮೀನಿನಲ್ಲೇ ಬಿಟ್ಟಿರುವುದು.
Published on

ಹೂವಿನಹಡಗಲಿ: ಈರುಳ್ಳಿ ಬೆಲೆ ಕುಸಿತ ಹಿನ್ನೆಲೆಯಲ್ಲಿ ತಾಲೂಕಿನ ರೈತರು ಫಸಲನ್ನು ಕಟಾವು ಮಾಡಿ ಜಮೀನಿನಲ್ಲೇ ಬಿಟ್ಟಿದ್ದಾರೆ.

ಕಳೆದ ತಿಂಗಳು ಒಂದು ಕೆ.ಜಿ.ಗೆ 15 ರಿಂದ 20 ರೂ. ಇದ್ದ ಈರುಳ್ಳಿ ಬೆಲೆ ಪ್ರಸ್ತುತ ಪ್ರತಿ ಕೆ.ಜಿ.ಗೆ 6 ರಿಂದ 8 ರೂ.ಗೆ ಕುಸಿದಿದೆ. ತಾಲೂಕಿನಿಂದ ದೂರದ ಊರುಗಳಿಗೆ ಖಾಸಗಿ ವಾಹನಗಳಲ್ಲಿ ಈರುಳ್ಳಿ ಮಾರಾಟ ಮಾಡಲು ತೆಗೆದುಕೊಂಡು ಹೋಗಿದ್ದ ರೈತರು ಬೆಲೆ ಸಿಗದೆ ಕಂಗಾಲಾಗಿದ್ದಾರೆ.

ಇನ್ನು ಈರುಳ್ಳಿ ಬೆಳೆಯಲು ಖರ್ಚು ಮಾಡಿದ ಹಣ ಕೈಗೆ ಸಿಗದ ಕಾರಣ ಈರುಳ್ಳಿಯನ್ನು ಕಟಾವು ಮಾಡಿ ಜಮೀನುಗಳಲ್ಲಿಯೇ ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net