ಅಮೃತ ಉದ್ಯಾನ ನಿರ್ಮಾಣಕ್ಕೆ ಮಣ್ಣು ಬಳಕೆ

Hadagali Mannu
ಹೂವಿನಹಡಗಲಿಯಲ್ಲಿ ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ಬಿಜೆಪಿ ಮಂಡಲ ಅದ್ಯಕ್ಷ ಸಂಜೀವರೆಡ್ಡಿ ಚಾಲನೆ ನೀಡಿದರು. ಪ್ರಮುಖರಾದ ಓದೋ ಗಂಗಪ್ಪ, ಈಟಿ.ಲಿಂಗರಾಜ್, ಬಿ.ಸಿರಾಜ್, ಮೀರಾಬಾಯಿ, ಭಾಗ್ಯಮ್ಮ, ವಿಜಯಲಕ್ಷ್ಮೀ ಇತರರಿದ್ದರು.
Published on

ಹೂವಿನಹಡಗಲಿ: ದೇಶದ ಪ್ರತಿಯೊಂದು ಗ್ರಾಮದ ಮಣ್ಣು ತನ್ನದೆಯಾದ ಶಕ್ತಿ ಹೊಂದಿದೆ ಎಂದು ಬಿಜೆಪಿ ಮಂಡಲ ಅದ್ಯಕ್ಷ ಸಂಜೀವ ರಡ್ಡಿ ಹೇಳಿದರು.

ಪಟ್ಟಣದ ಗೋಣಿಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ತಾಲೂಕಿನ ಪುಣ್ಯ ಕ್ಷೇತ್ರಗಳನ್ನು ಒಳಗೊಂಡಂತೆ ವಿವಿಧ ಗ್ರಾಮಗಳಿಂದ ಸಂಗ್ರಹಿಸಿ ತಂದಿರುವ ಮಣ್ಣನ್ನು ನವದೆಹಲಿಯ ಕರ್ತವ್ಯಪಥದಲ್ಲಿ ಹುತಾತ್ಮ ಯೋಧರ ಗೌರವಾರ್ಥ ನಿರ್ಮಾಣವಾಗಲಿರುವ ಅಮೃತ ಉದ್ಯಾನಕ್ಕೆ ಬಳಸಲಾಗುತ್ತದೆ.

ಇದೊಂದು ಐತಿಹಾಸಿಕ ದಾಖಲೆಯಾಗಲಿದೆ ಎಂದರು. ಜಿಲ್ಲಾ ಪ್ರಕೋಷ್ಠ ಸಂಚಾಲಕ ಓದೋ ಗಂಗಪ್ಪ, ಒಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ಈಟಿ ಲಿಂಗರಾಜ್, ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಬಿ.ಸಿರಾಜ್, ಮಂಡಲ ಪ್ರಧಾನ ಕಾರ್ಯದರ್ಶಿ ಜೆ.ಪರಶುರಾಮ್, ಬಿಜೆಪಿ ಪದಾಧಿಕಾರಿಗಳಾದ ಮೀರಾಬಾಯಿ, ಭಾಗ್ಯಮ್ಮ, ವಿಜಯಲಕ್ಷ್ಮೀ, ಶಿವನಗೌಡ, ಕೊಟ್ರೇಶ್ ನಾಯ್ಕ, ಪುರಸಭೆ ಸದಸ್ಯ ವೀರೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net