ಮೊಹರಂ ಕತಲ್‌ರಾತ್ರಿ: ಮೈಮೇಲೆ ಕೆಂಡ ಹಾಕಿಕೊಂಡು ಭಕ್ತಿ ಪರಾಕಾಷ್ಠೆ ಮೆರೆದ ಭಕ್ತರು

20082021 Hadagali Moharam
Published on

ಹೂವಿನಹಡಗಲಿ: ಮೊಹರಂ ಕತಲ್ ರಾತ್ರಿ ನಿಮಿತ್ತ ತಾಲೂಕಿನ ನಾಗತಿಬಸಾಪುರ ಗ್ರಾಮದಲ್ಲಿ ಹಿಂದು-ಮುಸ್ಲಿಮರು ಗುರುವಾರ ಪಕ್ಕೀರಸ್ವಾಮಿಯ ಕೆಂಡವನ್ನು ಮೈಮೇಲೆ ಹಾಕಿಕೊಳ್ಳುವ ಮೂಲಕ ಭಕ್ತಿಪರಾಕಾಷ್ಠೆ ಮೆರೆದರು. ಭಕ್ತರು ನೀರಿನಷ್ಟೇ ಸಲೀಸಾಗಿ ಕೆಂಡವನ್ನು ಮೈಮೇಲೆ ಹಾಕಿಕೊಂಡರು. ದಾವಣಗೆರೆ ಸೇರಿದಂತೆ ಸುತ್ತಲಿನ ನೂರಾರು ಭಕ್ತರು ಸಾಲುಗಟ್ಟಿ ಕುಳಿತ್ತಿದ್ದರು. ಪ್ರತಿವರ್ಷವೂ ಪಕ್ಕೀರಸ್ವಾಮಿಯ ಪವಾಡ ನಡೆಯುತ್ತದೆ. ಮೈಮೇಲೆ ಕೆಂಡ ಹಾಕಿಕೊಂಡರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಭಕ್ತರದ್ದಾಗಿದೆ. ಹರಕೆ ಹೊತ್ತವರು ಮೂರು ವರ್ಷ ಈ ಸೇವೆ ಮಾಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net