

ಹೂವಿನಹಡಗಲಿ: ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಶಾಂತಿ-ಸೌಹಾರ್ದದಿಂದ ಮೊಹರಂ ಆಚರಿಸಬೇಕು ಎಂದು ಸಿಪಿಐ ದೀಪಕ್ ಆರ್.ಬೂಸರೆಡ್ಡಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ನಡೆದ ಮೊಹರಂ ಶಾಂತಿ ಸಭೆಯಲ್ಲಿ ಮಾತನಾಡಿದರು. ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಎಲ್ಲ ಜನಾಂಗದವರು ಮೊಹರಂ ಆಚರಿಸುತ್ತಾರೆ. ಈ ಹಬ್ಬ ಬಂಧುತ್ವ ಬೆಸೆಯುವಂಥದ್ದಾಗಿದೆ. ಹಬ್ಬ ಆಚರಣೆಯ ನೆಪದಲ್ಲಿ ಯಾರ ಭಾವನೆಗಳಿಗೂ ಧಕ್ಕೆ ತರಬಾರದು ಎಂದರು.
ಪಿಎಸ್‌ಐ ವಿಜಯಕೃಷ್ಣ, ಅಂಜುಮನ್ ಕಮಿಟಿ ಸದಸ್ಯ ಹುಂಡಿ ಗೌಸ್‌ಸಾಬ್, ನಿವೃತ್ತ ತಹಸೀಲ್ದಾರ್ ಚಾಂದ್‌ಸಾಬ್, ಪ್ರಮುಖರಾದ ಖಾಜಾ ಹುಸೇನ್, ಗೌಸ್‌ಸಾಬ್, ಗೌಸ್ ಮೋಹಿದ್ದೀನ್, ಬಶೀರ್‌ಸಾಬ್, ದಾವಲ್‌ಮಲ್ಲಿಕ್, ಷರೀಫ್, ಮಂಜುನಾಥ, ಕೊಟ್ರೇಶ್, ನಾಗನಗೌಡ ಹಾಗೂ ಇತರರಿದ್ದರು.