ಮೊದಲಘಟ್ಟ ಆಂಜನೇಯ ರಥೋತ್ಸವ ಸಂಪನ್ನ

121222 Modalaghatta Anjaneya Ratostava
ಹೂವಿನಹಡಗಲಿ ತಾಲೂಕಿನ ಮೊದಲಘಟ್ಟ ಆಂಜಿನೇಯಸ್ವಾಮಿ ರಥೋತ್ಸವ ಸಾವಿರಕ್ಕೂ ಅಧಿಕ ಭಕ್ತರ ಸಮ್ಮುಖದಲ್ಲಿ ಭಾನುವಾರ ಸಂಜೆ ವಿಜೃಂಭಣೆಯಿಂದ ಜರುಗಿದ.
Published on

ಹೂವಿನಹಡಗಲಿ: ತಾಲೂಕಿನ ಮೊದಲಘಟ್ಟ ಆಂಜನೇಯ ಸ್ವಾಮಿ ರಥೋತ್ಸವ ಭಾನುವಾರ ಸಂಜೆ ಸಾವಿರಕ್ಕೂ ಅಧಿಕ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.

ಇದಕ್ಕೂ ಮೊದಲು ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ತಂದು, ರಥಕ್ಕೆ ಪ್ರದಕ್ಷಣೆ ಹಾಕಿಸಿ, ನಂತರ ಇರಿಸಲಾಯಿತು. ಸ್ವಾಮಿ ಪಟಾಕ್ಷಿಯನ್ನು ನಾಗರಳ್ಳಿ ಚಂದ್ರಶೇಖರ್‌ಗೆ ಪಡೆದುಕೊಂಡರು. ನಂತರ ರಥೋತ್ಸವ ನಡೆಯಿತು. ಸಾಗುತ್ತಿರುವ ರಥಕ್ಕೆ ಭಕ್ತರು ಬಾಳೆಹಣ್ಣು-ಉತ್ತತ್ತಿ ಸಮರ್ಪಿಸಿದರು. ತಾಲೂಕು ಸೇರಿ ಮುಂಡರಗಿ, ಗದಗ, ಕೊಪ್ಪಳ. ಶಿರಹಟ್ಟಿ ಮುಂತಾದ ತಾಲೂಕಿನ ಭಕ್ತರು ಪಾಲ್ಗೊಂಡಿದ್ದರು. ಅನೇಕ ಭಕ್ತರು ಹರಕೆ ತೀರಿಸಿದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿಬಂದೋಬಸ್ತ್ ಒದಗಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net