ಸಿಂಗಟಾಲೂರಿಂದ ನದಿಗೆ ನೀರು

Untitled design(4)
ಸಿಂಗಟಾಲೂರು ಏತ ನೀರಾವರಿ ಯೋಜನೆ ಬ್ಯಾರೇಜ್‌ನಿಂದ ಮಂಗಳವಾರ ನದಿಗೆ ನೀರು ಹರಿಸುತ್ತಿರುವುದು.
Published on

ಹೂವಿನಹಡಗಲಿ: ಮಲೆನಾಡು ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ತುಂಗಭದ್ರಾ ನದಿಗೆ ಒಳ ಹರಿವು ಹೆಚ್ಚಳವಾಗಿದ್ದು, ತಾಲೂಕಿನ ರಾಜವಾಳ ಸಮೀಪದ ಸಿಂಗಟಾಲೂರು ಏತ ನೀರಾವರಿ ಯೋಜನೆ ಬ್ಯಾರೇಜ್‌ನ 12 ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಗುತ್ತಿದೆ.

ಯಾರೇಜ್‌ನಲ್ಲಿ ಮಂಗಳವಾರ 79.000 ಕ್ಯೂಸೆಕ್ ಒಳ ಹರಿವು ದಾಖಲಾಗಿದ್ದು, 12 ಗೇಟ್‌ಗಳ ಮೂಲಕ ಅಷ್ಟೇ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಸುತ್ತಿದ್ದೇವೆ ಎಂದು ಸಿಂಗಟಾಲೂರು ಯೋಜನೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಘವೇಂದ್ರ ತಿಳಿಸಿದ್ದಾರೆ. ಭಾನುವಾರದಿಂದಲೂ ತಾಲೂಕಾದ್ಯಂತ ಸುರಿಯುತ್ತಿದ್ದ ಮಳೆ ಮಂಗಳವಾರ ಸ್ವಲ್ಪ ಬಿಡುವು ನೀಡಿತ್ತು. ಬೆಳಗ್ಗೆಯಿಂದಲೇ ಹೆಚ್ಚಿನ ಗಾಳಿ ಬೀಸುವ ಮೂಲಕ ತಣ್ಣನೆ ವಾತಾವರಣ ಸೃಷ್ಟಿಯಾಗಿತ್ತು. ಮಧ್ಯಾಹ್ನ ಸಮಯಕ್ಕೆ ಬಿಸಿಲು ಹೆಚ್ಚಳವಾಗಿತ್ತು. ವಿವಿಧ ಗ್ರಾಮಗಳಿಂದ ಪಟ್ಟಣಕ್ಕೆ ಆಗಮಿಸಿದ್ದ ಜನರು ಕೈಯಲ್ಲಿ ಛತ್ರಿ ಹಿಡಿದಿರುವ ದೃಶ್ಯಗಳು ಕಂಡು ಬಂದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net