ಮದಲಗಟ್ಟಿ ಚೌಡೇಶ್ವರಿಗೆ ಉಡಿತುಂಬಿದ ಮಹಿಳೆಯರು; ಕೋವಿಡ್ ಕಾರಣ ಸರಳವಾಗಿ ಪೂಜೆ ಸಲ್ಲಿಕೆ

02062021 Hadagali Chowdeshwari devi pooje
Published on

ಹೂವಿನಹಡಗಲಿ: ತಾಲೂಕಿನ ಮದಲಗಟ್ಟಿ ಗ್ರಾಮದೇವತೆ ಚೌಡೇಶ್ವರಿ ದೇವಿಗೆ ಗ್ರಾಮಸ್ಥರಿಂದ ಮಂಗಳವಾರ
ಪೂಜೆ ಸಲ್ಲಿಕೆ ಹಾಗೂ ಉಡಿ ತುಂಬುವ ಸೇವೆ ಜರುಗಿತು. ಕೋವಿಡ್ ಸೋಂಕು ಭೀತಿಯ ಹಿನ್ನೆಲೆಯಲ್ಲಿ ಸರಳವಾಗಿ 4 ಮಂಗಳವಾರ ಪೂಜಿಸಿ, 5ನೇ ಮಂಗಳವಾರದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿ ಉಡಿ ತುಂಬಲಾಯಿತು.

ದೇವಸ್ಥಾನ ಸಮಿತಿ ಬೆಳಗ್ಗೆ ಸಾಂಕೇತಿಕವಾಗಿ ಪೂಜೆ ಸಲ್ಲಿಸಿ, ಸಂಪ್ರದಾಯದಂತೆ ಉಡಿ ತುಂಬಿದರು. ನಂತರ ಗ್ರಾಮದ ಮಹಿಳೆಯರು ದೇವಿಗೆ ಹೊರ ಬಾಗಿಲಲ್ಲೆ ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಉಡಿ ತುಂಬಿ ಕರೊನಾ ಮಹಾಮಾರಿ ತೊಲಗಲಿ, ಮಳೆ, ಬೆಳೆ ಸಮೃದ್ಧಿಯಾಗಲಿ ಎಂದು ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net