ಕರ್ತವ್ಯಕ್ಕೆ ಹಾಜರಾದ ಸಾರಿಗೆ ಸಿಬ್ಬಂದಿಗೆ ಸನ್ಮಾನಿಸಿದ ಹೊಸಪೇಟೆ ವಿಭಾಗದ ಡಿಸಿ ಜಿ.ಶೀನಯ್ಯ

09042021 Hadagali KSRTC bus Depo DC duty attending
Published on

ಹೂವಿನಹಡಗಲಿ: ಪಟ್ಟಣದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮೂರನೇ ದಿನವೂ ಮುಷ್ಕರ ಮುಂದುವರಿಸಿದ್ದರಿಂದ ಪ್ರಯಾಣಿಕರು ಅನಿವಾರ್ಯವಾಗಿ ಖಾಸಗಿ ವಾಹನಗಳನ್ನು ಅವಲಂಬಿಸಬೇಕಾಯಿತು.

ಶುಕ್ರವಾರ ಬೆಳಗ್ಗೆಯಿಂದಲೇ ಯಾವೊಬ್ಬ ನೌಕರರು ಡಿಪೋದತ್ತ ಸುಳಿದಿರಲಿಲ್ಲ. ಬಳಿಕ ಹೊಸಪೇಟೆ ವಿಭಾಗದ ಡಿಸಿ ಜಿ.ಶೀನಯ್ಯ, ಕೆಲ ಚಾಲಕ ಮತ್ತು ನಿರ್ವಾಹಕರನ್ನು ಫೋನ್ ಮೂಲಕ ಸಂಪರ್ಕಿಸಿ ಬರ ಹೇಳಿದರು. ಇವರ ಮಾತಿಗೆ ಮನ್ನಣೆ ನೀಡಿ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಯನ್ನು ಸನ್ಮಾನಿಸಿ ಹೊಸಪೇಟೆ, ಹರಪನಹಳ್ಳಿ, ಎಚ್.ಬಿ.ಹಳ್ಳಿ ಭಾಗಗಳಿಗೆ ಬಸ್‌ಗಳನ್ನು ಬಿಟ್ಟರು. ಬೇರೆ ಮಾರ್ಗಕ್ಕೆ ತೆರಳಬೇಕಿದ್ದ ಪ್ರಯಾಣಿಕರು ಖಾಸಗಿ ವಾಹನಗಳನ್ನೇರಿ ಪ್ರಯಾಣ ಬೆಳೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net