ಮಲ್ಲಿಗೆ ನಾಡಿನ ಪ್ರತಿಭೆಗಳು ಬೆಳೆಯಲಿ; ಸಚಿವ ಬಿ.ಶ್ರೀರಾಮುಲು ಆಶಯ; ಕಿರುಚಿತ್ರ ‘ವಿಧಿಬಲಿ’ ಪೋಸ್ಟರ್ ಬಿಡುಗಡೆ

Vidhibali Short Film Poster release
ಬೆಂಗಳೂರಿನಲ್ಲಿ ಹೂವಿನಹಡಗಲಿಯ ನಟ ಕ್ರಾಂತಿ ಅಭಿನಯದ ವಿಧಿಬಲಿ ಕಿರುಚಿತ್ರದ ಪೋಸ್ಟರ್ ಅನ್ನು ಸಾರಿಗೆ ಸಚಿವ ಬಿ.ಶ್ರೀರಾಮುಲು ಶನಿವಾರ ಬಿಡುಗಡೆ ಮಾಡಿದರು.
Published on

ಹೂವಿನಹಡಗಲಿ: ಕನ್ನಡ ಚಿತ್ರರಂಗದಲ್ಲಿ ಮಲ್ಲಿಗೆ ನಾಡಿನ ಯುವ ಕಲಾವಿದರು ಬೆಳೆಯಲಿ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು. ಬೆಂಗಳೂರಿನ ಅವರ ನಿವಾಸದಲ್ಲಿ ಶನಿವಾರ ಹೂವಿನಹಡಗಲಿಯ ಯುವ ನಟ ಎಸ್.ಕ್ರಾಂತಿ ಅಭಿನಯದ ಕಿರುಚಿತ್ರ ‘ವಿಧಿಬಲಿ’ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು.

ಕಿರುಚಿತ್ರಕ್ಕೆ ಅವಶ್ಯ ಎನಿಸಿದ ಅಗತ್ಯ ಸಹಕಾರ ನೀಡುತ್ತೇನೆ. ಗ್ರಾಮೀಣ ಭಾಗದ ಕಲಾವಿದರು ಹೊಸ ಯೋಚನೆಗಳ ಮೂಲಕ ಚಿತ್ರರಂಗಕ್ಕೆ ಬಂದು ಛಾಪು ಮೂಡಿಸಬೇಕು. ರಂಗಭೂಮಿ, ಜಾನಪದ ಕಲೆಯನ್ನೂ ಉಳಿಸಿ ಬೆಳೆಸಬೇಕು ಎಂದರು. ಚಿತ್ರದ ನಿರ್ದೇಶಕ ಸ್ಯಾಂಡಿ ಮಾತನಾಡಿ, ಹಡಗಲಿಯ ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ಚಿತ್ರೀಕರಣ ಮಾಡಲಾಗಿದೆ. ಸಂಗೀತಕ್ಕೆ ಅಂಗವಿಕಲರು ಕೈಜೋಡಿಸಿದ್ದಾರೆ. ಯುವಕರನ್ನು ಜಾಗೃತಿ ಮೂಡಿಸುವ ಚಿತ್ರವಾಗಿದೆ ಎಂದು ತಿಳಿಸಿದರು. ಎಸ್.ನಿಂಗರಾಜ ಹಾಗೂ ಚಿತ್ರತಂಡದ ಕಲಾವಿದರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net