ಇ-ಕೆವೈಸಿ ನೋಂದಣಿಗೆ ಇಂದು ಕೊನೆ ದಿನ

30082022 hdl e-kyc
Published on

ಹೂವಿನಹಡಗಲಿ: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಆರ್ಥಿಕ ನೆರವು ಪಡೆಯಲು ಅರ್ಹ ರೈತ ಫಲಾನುಭವಿಗಳು ಇ-ಕೆವೈಸಿಯನ್ನು ಆ.31ರೊಳಗೆ ಮಾಡಿಸಬೇಕು ಎಂದು ಇಟ್ಟಿಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಜಿ.ಕೊಟ್ರೇಶ ಹೊಳಗುಂದಿ ಗ್ರಾಮದಲ್ಲಿ ಸೋಮವಾರ ಹೇಳಿದರು.

ಗ್ರಾಮದಲ್ಲಿ ಅರ್ಹ ರೈತ ಫಲಾನುಭವಿಗಳಿಗೆ ಮಾಹಿತಿ ನೀಡಿ ರೈತರು ತಮ್ಮ ಆಧಾರ್ ಕಾರ್ಡ್ ಮೂಲಕ ಇ-ಕೆವೈಸಿಯನ್ನು ಆ. 31ರೊಳಗೆ ಮಾಡದಿದ್ದಲ್ಲಿ ಆರ್ಥಿಕ ನೆರವು ಸ್ಥಗಿತಗೊಳ್ಳಲಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ರೈತ ಫಲಾನುಭವಿಗಳು ಇ-ಕೆವೈಸಿಯನ್ನು ಹತ್ತಿರದ ನಾಗರಿಕ ಸೇವಾ ಕೇಂದ್ರಗಳಲ್ಲಿ ಮಾಡಿಸಬೇಕು ಎಂದರು. ಗ್ರಾಪಂ ಸದಸ್ಯ ರುದ್ರಗೌಡ, ಅರ್ಹ ರೈತರಾದ ಎ.ಜಿ.ಹಾಲನಗೌಡ, ಹಾವನೂರು ರಾಜಶೇಖರ, ವೀರಣ್ಣ, ಎನ್.ಎಸ್.ಸಿದ್ದನಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net