ಕುರುಬ ಸಮುದಾಯದ ಕೊಡುಗೆ ಅಪಾರ; ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹೇಳಿಕೆ

060522 Haravi Bereswara Temple Prana Foundation
ಹೂವಿನಹಡಗಲಿ ತಾಲೂಕು ಹರವಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಬೀರೇಶ್ವರ ದೇವಸ್ಥಾನದ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಚಾಲನೆ ನೀಡಿದರು.
Published on

ಹೂವಿನಹಡಗಲಿ: ಈ ನಾಡಿಗೆ ಕುರುಬ ಸಮುದಾಯದ ಕೊಡುಗೆ ಗಣನೀಯವಾದುದ್ದು, ಹಾಲುಮತದವರು ಪಾವಿತ್ರತೆ ಮತ್ತು ಶುದ್ಧ ಮನಸ್ಸಿನವರು ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.

ತಾಲೂಕಿನ ಹರವಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಬೀರೇಶ್ವರಸ್ವಾಮಿಯ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅನಾದಿ ಕಾಲದಿಂದಲೂ ವಾಡಿಕೆಯಂತೆ ಯಾವುದೇ ಶುಭ ಸಮಾರಂಭದಲ್ಲಿ ಕುರುಬರ ಬೋಣಿಗೆ ಮಾಡಿದರೆ ಒಳ್ಳೆಯದಾಗುತ್ತದೆ ಎಂಬುದು ಸತ್ಯ. ಮುಂದಿನ ದಿನಗಳಲ್ಲಿ ಬಡವರಿಗೆ ನಿವೇಶನಗಳನ್ನು ನೀಡಿ ಆ ನಗರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಇಡಲಾಗುವುದು ಎಂದು ಭರವಸೆ ನೀಡಿದರು.

ಕರ್ನಾಟಕ ಕುರುಬ ಸಂಘದ ನಿರ್ದೇಶಕರಾದ ಬಿ.ಹನುಮಂತಪ್ಪ ಕಾಲ್ವಿ ಮಾತನಾಡಿ,ಹಿಂದು ಸಂಪ್ರದಾಯದಲ್ಲಿ ವಿಶೇಷ ಪೂಜೆ ಸಮಾರಂಭಗಳಲ್ಲಿ ಹಾಲುಮತಸ್ಥರನ್ನೇ ಕರೆಸಿ ಕಾರ್ಯಗಳನ್ನ ಆರಂಭಿಸುತ್ತಾರೆ ಎಂದರು. ಪುರಸಭೆಯ ಅಧ್ಯಕ್ಷೆ ಜೋತಿ ಮಲ್ಲಣ್ಣ, ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಅಟವಾಳಗಿ ಕೊಟ್ರೇಶ್, ಕನಕ ಬ್ಯಾಂಕ್ ಅಧ್ಯಕ್ಷ ಬಿ.ಎಚ್.ಶಿವಕುಮಾರ್, ಇಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಚಂದ್ರನಾಯ್ಕ, ತಾಲೂಕು ಕುರುಬ ಸಂಘದ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ, ಕನಕ ಬ್ಯಾಂಕ್ ನಿರ್ದೇಶಕರಾದ ಎಂ.ಬೀರಪ್ಪ, ಆರ್.ಪಕ್ಕಿರಪ್ಪ, ಬಿ.ವಸಂತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net