

ಹೂವಿನಹಡಗಲಿ: ನರೇಗಾ ಕಾಮಗಾರಿ ಕೇವಲ ಕೂಲಿ ಕಾರ್ಮಿಕರಿಗಷ್ಟೇ ಅಲ್ಲದೆ, ಗ್ರಾಮೀಣ ಭಾಗಗಳ ಪದವೀಧರರಿಗೂ ಆಸರೆಯಾಗಿದೆ. ತಾಲೂಕಿನಲ್ಲಿ 400ಕ್ಕೂ ಹೆಚ್ಚು ಪದವೀಧರರು ನರೇಗಾ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬದು, ಕೃಷಿ ಹೊಂಡಗಳ ನಿರ್ಮಾಣಗಳಲ್ಲಿ ತೊಡಗಿದ್ದಾರೆ. ಅಡವಿಮಲ್ಲನಕೇರಿ ತಾಂಡಾ, ಮಹಾಜನದಹಳ್ಳಿ, ಮಾನ್ಯರ ಮಸಲವಾಡ, ಬೀರಬ್ಬಿ, ಹಿರೇಹಡಗಲಿ, ಮಾಗಳ, ಕೊಂಬಳಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಬಿ.ಎ. ಬಿಕಾಂ. ಎಂ.ಎ,. ಎಂಕಾಂ ಪದವೀಧರರಿಗೆ ಆಸರೆಯಾಗಿದೆ. ಬೀರಬ್ಬಿ, ಅರಳಿ ತಾಂಡಾಗಳಲ್ಲಿ ನಡೆಯುತ್ತಿರುವ ಕೃಷಿ ಹೊಂಡ ಕಾಮಗಾರಿಯಲ್ಲಿ ಹೆಚ್ಚು ಪದವೀಧರರು ಕೆಲಸ ಮಾಡುತ್ತಿದ್ದಾರೆ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ನೂರಕ್ಕೂ ಹೆಚ್ಚು ಪದವೀಧರರು ಕೂಲಿ ಕೆಲಸ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಬಿ.ಪಿ.ಎಡ್. ಮಾಡುತ್ತಿದ್ದೇನೆ. ರಾಷ್ಟ್ರೀಯ ವಾಲಿಬಾಲ್ ಆಟಗಾರನಾಗಿದ್ದೇನೆ. ಆದರೆ ಕರೊನಾ ಸಂದರ್ಭ ನರೇಗಾ ನನಗೆ ಆಸರೆಯಾಗಿದೆ. ನಾವು ಮಾಡುವ ಉದ್ಯೋಗಕ್ಕೆ ಗೌರವ ಕೊಡಬೇಕು.| ಲಕ್ಷ್ಮಣನಾಯ್ಕ, ಅಡವಿ ಮಲ್ಲನಕೇರಿ ತಾಂಡಾ.ತಾಲೂಕಿನಲ್ಲಿ 400 ಕ್ಕೂ ಹೆಚ್ಚು ಪದವೀಧರರು ನರೇಗಾದಡಿ ಕೆಲಸ ಮಾಡಿ, ಕೂಲಿ ಪಡೆಯುತ್ತಿದ್ದಾರೆ. ಇತರರಿಗೂ ಮಾದರಿಯಾಗಿದ್ದಾರೆ.| ಯು.ಎಚ್. ಸೋಮಶೇಖರ್, ತಾಪಂ ಇಒ. ಹೂವಿನಹಡಗಲಿ.