

ಹೂವಿನಹಡಗಲಿ: ಮಾನವನ ದುರಾಸೆಯಿಂದ ಪರಿಸರ ಹಾಳಾಗುತ್ತಿದೆ. ಎಲ್ಲರಿಗೂ ಪರಿಸರದ ಮಹತ್ವವನ್ನು ತಿಳಿಸಬೇಕಾಗಿದೆ ಎಂದು ತಾಲೂಕು ಪಂಚಾಯಿತಿ ಇಒ ಉಮೇಶ್ ಮೈನಹಳ್ಳಿ ಹೇಳಿದರು.
ಪಟ್ಟಣದ ಎಸ್‌ಆರ್‌ಎಂಪಿಪಿ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ತಾಪಂ, ಅರಣ್ಯ ಇಲಾಖೆ, ನ್ಯಾಯಾಂಗ ಇಲಾಖೆ, ವಕೀಲರ ಸಂಘದ ಹಾಗೂ ಇತರ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.
ಪ್ರಕೃತಿ ನಮಗೆ ಅಮೂಲ್ಯವಾದ ಕೊಡುಗೆಯನ್ನು ನೀಡಿದೆ. ಪ್ರಕೃತಿಯು ಭೂಮಿ ಮೇಲಿನ ಪ್ರತಿಯೊಂದು ಜೀವ ಸಂಕುಲಕ್ಕೂ ಅಗತ್ಯವಾಗಿದೆ. ಪರಿಸರವನ್ನು ಬೆಳೆಸಿ ಅಸಮತೋಲವನ್ನು ಕಾಪಾಡಬಹುದಾಗಿದೆ ಎಂದರು. ಪಟ್ಟಣದ ನ್ಯಾಯಾಲಯದ ಆವರಣ, ಸರ್ಕಾರಿ ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು.
ನ್ಯಾಯಾಧೀಶೆ ಅಕ್ಷತಾ, ಅರಣ್ಯಾಧಿಕಾರಿಗಳಾದ ರೇಣುಕಮ್ಮ, ಗುಡ್ಡಪ್ಪ, ಪ್ರಾಚಾರ್ಯ ವಿಜಯಕುಮಾರ, ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ಇತರರಿದ್ದರು.