

ಹೂವಿನಹಡಗಲಿ: ವೀರಶೈವ ವಿದ್ಯಾವರ್ಧಕ ಸಂಘ ಹಾಗೂ ವೀರಶೈವ ಸಮಾಜಕ್ಕೆ ಡಾ.ಎನ್.ತಿಪ್ಪಣ್ಣನವರ ಕೊಡುಗೆ ಅಪಾರ ಎಂದು ಜಿಬಿಆರ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸಿ.ಮೋಹನರೆಡ್ಡಿ ಹೇಳಿದರು.
ಪಟ್ಟಣದ ಜಿಬಿಆರ್ ಕಾಲೇಜಿನ ಹಾನಗಲ್ಲ ಕುಮಾರೇಶ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾಜಿ ಸಭಾಪತಿ ಡಾ.ಎನ್.ತಿಪ್ಪಣ್ಣ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಸವಾದಿ ಶರಣರ ತತ್ವಗಳನ್ನು ಅಳವಡಿಸಿಕೊಂಡು ರಾಜ್ಯದ ಬಹುತೇಕ ಕಡೆ ಅನ್ನ ಹಾಗೂ ಅಕ್ಷರ ದಾಸೋಹ ಮಾಡುವ ಮೂಲಕ ಎನ್.ತಿಪ್ಪಣ್ಣ ಬಡಮಕ್ಕಳ ಪಾಲಿಗೆ ಬೆಳಕಾಗಿದ್ದರು ಎಂದರು.
ವೀ.ವಿ.ಸಂಘದ ಆಜೀವ ಸದಸ್ಯ ಮಹೇಶ್ವರಗೌಡ ಮಾತನಾಡಿ, ತಿಪ್ಪಣ್ಣ ಅವರು ವೀರಶೈವ ವಿದ್ಯಾವರ್ಧಕ ಸಂಘದ ಬೆಳವಣಿಗೆಗೆ ಹಗಲಿರುಳು ಶ್ರಮಿಸಿದ್ದಾರೆ ಎಂದರು. ಪ್ರಾಚಾರ್ಯ ಎಸ್.ಎಸ್.ಪಾಟೀಲ, ವೀ.ವಿ.ಸಂಘದ ಆಜೀವ ಸದಸ್ಯ ಬೀರಬ್ಬಿ ಬಸವರಾಜ, ನಿವೃತ್ತ ಪ್ರಾಧ್ಯಾಪಕ ಎಸ್.ವೀರಪ್ಪ ಇತರರು ಮಾತನಾಡಿದರು.
ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಎಂ.ಮಲ್ಲಿಕಾರ್ಜುನ, ಕೆ.ಎಂ.ಉದಾಸಿ, ವೀ.ವಿ.ಸಂಘದ ಆಜೀವ ಸದಸ್ಯರಾದ ಓಲಿ ಈಶಪ್ಪ, ಕೆ.ಮುದುಕಪ್ಪ, ಡಾ.ಅಟವಾಳಿಗಿ ಪ್ರಕಾಶ್, ವಿಜಯಕುಮಾರ್ ಇತರರಿದ್ದರು.