ಜಾನಪದ ಸಾಹಿತ್ಯ ಸಂಸ್ಕೃತಿಯ ತಾಯಿ ಬೇರು ಎಂದ ಸಾಹಿತಿ ಎಲ್.ಮಧುನಾಯ್ಕ

27082022 Harapanahalli janapada
Published on

ಹೂವಿನಹಡಗಲಿ: ಎಲ್ಲಾ ಸಾಹಿತ್ಯಕ್ಕೂ ಜಾನಪದ ಸಾಹಿತ್ಯ ಸಂಸ್ಕೃತಿಯ ತಾಯಿಬೇರಾಗಿದೆ ಎಂದು ಸಾಹಿತಿ ಎಲ್.ಮಧುನಾಯ್ಕ ಹೇಳಿದರು.

ಮೀರಾಕೊರ‌್ನಹಳ್ಳಿ ಪ್ರೌಢ ಶಾಲೆ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ವಿಜಯನಗರ ಹಾಗೂ ಶ್ರೀ ಚಂದ್ರಶೇಖರ ಕಲಾಬಳಗ ಅಂಗೂರು ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ‘ಬಾ ಮರಳಿ ಜಾನಪದಕ್ಕೆ’ ಗೀತ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಭಾರತೀಯರ ಕಲೆಗಳು ಭಾರತೀಯರಿಂದಲೇ ಮರೆಯಾಗಬಾರದು. ಬಯಲಾಟ, ದೊಡ್ಡಾಟ, ಲಾವಣಿ, ನಾಟಕ ಮೊದಲಾದ ಜಾನಪದ ಕಲೆಗಳು ಇಂದಿನ ಯುವಜನತೆ ಉಳಿಸಿ ಬೆಳೆಸಲು ಮುಂದಾಗಬೇಕು ಎಂದರು.

ಕರ್ನಾಟಕ ಜಾನಪದ ಪರಿಷತ್ತಿನ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಸಿ.ಪರಶುರಾಮ ಅಂಗೂರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇವಗೊಂಡನಹಳ್ಳಿ ಗ್ರಾಪಂ ಅಧ್ಯಕ್ಷ ನಂದಿಹಳ್ಳಿ ಮಹೇಂದ್ರ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಎಂ. ಜಗದೀಶ, ಶಾಲಾ ಮುಖ್ಯಶಿಕ್ಷಕ ಬಿ.ಸೂರ್ಯಕಾಂತ, ಎಸ್ಡಿಎಂಸಿ ಅಧ್ಯಕ್ಷ ಬಸವರಾಜಯ್ಯ, ಎಲ್.ನೇಮ್ಯಾನಾಯ್ಕ, ಟಿ.ಹನುಮಂತಪ್ಪ, ಕೆ.ಎಚ್.ಗಂಗಾಧರ, ಎಚ್.ಪ್ರತಿಭಾ ಇದ್ದರು. ಬಿ.ಬಾಬುಸಾಹೇಬ್ ಮತ್ತು ಸಂಗಡಿಗರು ಜಾನಪದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಸ್ಪರ್ಧೆಯಲ್ಲಿ ಎಸ್.ಮಮತಾ(ಪ್ರಥಮ ಸ್ಥಾನ) ಪದ್ಮಾ ಬನ್ನಿ (ದ್ವಿತೀಯ ಸ್ಥಾನ) ಬಹುಮಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net