ನಂಜನಗೂಡು ಸಂಗಮ ಕ್ಷೇತ್ರದ ಮಹಾದೇವ ತಾತನ ಮಠಕ್ಕೆ ತಡೆಗೋಡೆ ನಿರ್ಮಿಸಲು ಭಕ್ತರ ಒತ್ತಾಯ

19102020 H Hadagali appele
Published on

ಹೂವಿನಹಡಗಲಿ: ಪ್ರತಿ ಮಳೆಗಾಲದಲ್ಲಿ ಪ್ರವಾಹ ಭೀತಿ ಎದುರಿಸುವ ಮೈಸೂರು ಜಿಲ್ಲೆ ನಂಜನಗೂಡು ಸಂಗಮ ಕ್ಷೇತ್ರದ ಮಹಾದೇವ ತಾತನವರ ಮಠಕ್ಕೆ ತಡೆಗೋಡೆ ನಿರ್ಮಿಸುವಂತೆ ಆಗ್ರಹಿಸಿ ಹೊಳಗುಂದಿ, ಮೋರಿಗೇರಿ, ಕತ್ತೆಬೆನ್ನೂರು ಗ್ರಾಮದ ಭಕ್ತರು ಸೋಮವಾರ ತಹಸೀಲ್ದಾರ್ ವಿಶ್ವಜಿತ್ ಮೆಹತಾ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.

ಕಪಿಲ ನದಿ ತುಂಬಿ ಹರಿದಾಗಲೆಲ್ಲ ಸಂಗಮ ಕ್ಷೇತ್ರದಲ್ಲಿ ಪ್ರವಾಹ ಭೀತಿ ಎದುರಾಗುತ್ತಿದೆ. ನದಿಯಲ್ಲಿ 60 ಸಾವಿರ ಕ್ಯೂಸೆಕ್ ನೀರು ಹರಿದಾಗ ತಾತನವರ ಗದ್ದುಗೆ ಸಂಪೂರ್ಣ ಜಲಾವೃತವಾಗುತ್ತದೆ. ಇದರಿಂದ ಭಕ್ತರಿಗೆ ತೊಂದರೆಯಾಗುತ್ತಿದೆ. ಕೂಡಲೇ ರಾಜ್ಯ ಸರ್ಕಾರ ಪ್ರವಾಹ ತಡೆಗೋಡೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಭಕ್ತರಾದ ತುರುಕಾಣಿ ಮುರುಗೇಶ, ಜಗದೀಶಪ್ಪ, ವಕೀಲರಾದ ಗಂಗಾಧರ, ಗುರುಬಸವರಾಜ್, ಮಲ್ಲನಗೌಡ ಹಾಗೂ ಚನ್ನವೀರನಗೌಡ, ಕೊಟ್ರಗೌಡ, ಲಿಂಗನಗೌಡ, ಲೋಕಪ್ಪ, ಬಿ.ನಾಗರಾಜಪ್ಪ, ಭರಮನ ಗೌಡ, ರುದ್ರಪ್ಪ, ಹೇಮಗಿರಿಯಪ್ಪ, ಗುಮಾಸ್ತ ಶರಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net