ಫೆ.11ರಂದು ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ

Mailara Temple
Published on

ಹೂವಿನಹಡಗಲಿ: ತಾಲೂಕಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಫೆ.11ರಂದು ನಡೆಯಲಿದೆ. ಫೆ.1ರಂದು ರಥಸಪ್ತಮಿ, ಮಾರ್ತಾಂಡ ಭೈರವನ ಡೆಂಕನ ಮರಡಿ ಆರೋಹಣ, ಕಡುಬಿನ ಕಾಳಗ ಜರುಗಲಿದೆ. ಭರತ ಹುಣ್ಣಿಮೆಯ ದಿನವಾದ ಫೆ.9ರಂದು ಧ್ವಜಾರೋಹಣ, 10ರಂದು ತ್ರಿಶೂಲ ಪೂಜೆ, 11ರಂದು ಬೆಳಗ್ಗೆ 9 ಗಂಟೆಗೆ ಮಲ್ಲಾಸುರನ ಸಂಹಾರ, ಡೆಂಕನ ಮರಡಿಗೆ ಗುಪ್ತಮೌನ ಸವಾರಿ, ಸಂಜೆ 5.30 ಕ್ಕೆ ಮೈಲಾರ ಲಿಂಗೇಶ್ವರ ದೇವಸ್ಥಾನದ ಶ್ರೀ ಗುರುಪರಂಪರೆ ಶ್ರೀ ಗುರುಗಳಿಂದ ಭಂಡಾರ ಆಶೀರ್ವಾದ ನಂತರ ಗೊರವಯ್ಯ ಕಾರ್ಣಿಕ ನುಡಿಯುತ್ತಾನೆ ಎಂದು ದೇವಸ್ಥಾನದ ಇಒ ಯು.ಎಚ್.ಪ್ರಕಾಶ್ ರಾವ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net