ಆಂಬುಲೆನ್ಸ್‌ನಲ್ಲಿ ಗಂಡು ಮಗುವಿಗೆ ಜನ್ಮ

hadagali Ambulance
ಆಂಬುಲೆನ್ಸ್‌ನಲ್ಲಿ ಅಕ್ಕಮಹಾದೇವಿಗೆ ಹೆರಿಗೆ ಮಾಡಿಸಿದ ತುರ್ತು ಚಿಕಿತ್ಸಕ ಕೃಷ್ಣನಾಯ್ಕ ಜತೆ ಕುಟುಂಬಸ್ಥರು ಇರುವುದು.
Published on

ಹೂವಿನಹಡಗಲಿ: ತಾಲೂಕಿನ ಅಂಗೂರು ಮತ್ತು ಹೂವಿನಹಡಗಲಿ ಮಾರ್ಗಮಧ್ಯೆ ಹೆರಿಗೆ ನೋವು ಹೆಚ್ಚಿದ್ದರಿಂದ ಗರ್ಭಿಣಿಯು ಆಂಬುಲೆನ್ಸ್‌ನಲ್ಲಿಯೇ ಶುಕ್ರವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಅಂಗೂರು ಗ್ರಾಮದ ಅಕ್ಕಮಹಾದೇವಿಗೆ ಬೆಳಗಿನ ಜಾವ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಕುಟುಂಬಸ್ಥರು ಆಂಬುಲೆನ್ಸ್ ಕರೆಸಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ನೋವು ಹೆಚ್ಚಿದ್ದು, ತುರ್ತು ಚಿಕಿತ್ಸಕ ಕೃಷ್ಣನಾಯ್ಕ ಮತ್ತು ಚಾಲಕ ಪ್ರಭುರೆಡ್ಡಿ ಸಹಜ ಹೆರಿಗೆ ಮಾಡಿಸಿದ್ದಾರೆ. ತಾಯಿ, ಮಗು ಆರೋಗ್ಯವಾಗಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net