

ಹೂವಿನಹಡಗಲಿ: ತಾಲೂಕಿನಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಲು ರಾಯಚೂರು ಕೃಷಿ ಸಂಶೋಧನಾ ಕೇಂದ್ರದ ಸಮಿತಿಯಿಂದ ಮಂಗಳವಾರ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ಮಾಡಿದರು.
ಕೃಷಿ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ.ಸಿ.ಎಂ. ಕಾಲಿಬಾವಿ ಮಾತನಾಡಿ, ಹೂವಿನಹಡಗಲಿ ತಾಲೂಕಿನ ಬಹಳ ದಿನಗಳ ಬೇಡಿಕೆಯಾದ ಕೃಷಿ ಸಂಶೋಧನಾ ಕೇಂದ್ರವನ್ನು ರೈತರಿಗೆ ಪ್ರಯೋಜನವಾಗಲೆಂದು ರಾಯಚೂರು ಕೃಷಿ ಸಂಶೋಧನಾ ಕೇಂದ್ರದ ಸಮಿತಿಯಿಂದ ತಾಲೂಕಿನ ವಿವಿಧ ಸ್ಥಳಗಳನ್ನು ಪರಿಶೀಲನೆ ಮಾಡಿದ್ದಾರೆ. ಸರ್ಕಾರದ ಆದೇಶ ಬಂದ ಮೇಲೆ ಸ್ಥಳವನ್ನು ನಿಯುಕ್ತಿ ಮಾಡುತ್ತಾರೆ ಎಂದು ಹೇಳಿದರು. ಕೇಂದ್ರದ ಡಾ. ಅರುಣಕುಮಾರ್ ಹೊಸಮನಿ, ಡಾ.ಹರಿಶ್ಚಂದ್ರನಾಯ್ಕ, ಕೀಟ ತಜ್ಞ ಡಾ. ಬದರಿನಾಯ್ಕ, ಅಖಂಡ ಕರ್ನಾಟಕ ರೈತರ ಸಂಘದ ತಾಲೂಕು ಅಧ್ಯಕ್ಷ ರವೀಂದ್ರಸ್ವಾಮಿ, ಉಪಾಧ್ಯಕ್ಷ ಶಿವನಗೌಡ, ಕಬ್ಬು ಬೆಳೆಗಾರರ ಸಂಘಧ ತಾಲೂಕು ಅಧ್ಯಕ್ಷ ಬೆನ್ನೂರು ಹಾಲೇಶ, ಕಳಸಾಪುರ ನಾಗಪ್ಪ, ಶ್ರೀಧರ್ ನಾಯ್ಕ ಇತರರು ಇದ್ದರು.