ವೇತನಕ್ಕಾಗಿ ಹೊರಗುತ್ತಿಗೆ ನೌಕರರ ಪ್ರತಿಭಟನೆ

20022022 Hutti workers protest
Published on

ಹಟ್ಟಿಚಿನ್ನದಗಣಿ: ಹೊರ ಗುತ್ತಿಗೆಯಡಿ ಗಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 180 ಪೌರ ಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. 2 ತಿಂಗಳಿಂದ ವೇತನ ಪಾವತಿಸಿಲ್ಲ. ಇಎಸ್‌ಐ, ಪಿಎಫ್ ವಿವರ, ವೇತನ ರಸೀದಿ, ಸುರಕ್ಷಾ ಪರಿಕರಗಳನ್ನು ನೀಡುತ್ತಿಲ್ಲ. ನೌಕರರ ಕಾಲನಿಯಲ್ಲಿರುವ ಮನೆ ರಿಪೇರಿ ಮಾಡುವಾಗ ಬಿದ್ದ ಕಾರ್ಮಿಕನನ್ನು ಅಂದು ಗೈರುಹಾಜರಿ ಎಂದು ತೋರಿಸಲಾಗಿದೆ. ಹೆಚ್ಚಳವಾಗಿರುವ ವೇತನ ನೀಡಬೇಕು.ಕ್ಯಾಂಟೀನ್ ಸೌಲಭ್ಯದ ಹೆಸರಲ್ಲಿ ಕಡಿತಗೊಳಿಸಲಾಗಿರುವ ಹೆಚ್ಚುವರಿ ಹಣವನ್ನು ಹಿಂದಿರುಗಿಸಬೇಕು. ಭದ್ರತೆ ಇಲ್ಲದೆ ಕೆಲಸ ಮಾಡುತ್ತಿದ್ದು, ಕೂಡಲೇ ಸಂಬಂಧಪಟ್ಟವರು ಗಮನಹರಿಸಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net