ಕಾಮಗಾರಿ ತ್ವರಿತ ಮುಗಿಸಲು ಅಧಿಕಾರಿಗಳಿಗೆ ಜಿಪಂ ಸಿಇಒ ಶೇಖ್ ತನ್ವಿರ್‌ಆಸೀಫ್ ಸೂಚನೆ

Anwari Village Development work
ಆನ್ವರಿ ಗ್ರಾಪಂ ವ್ಯಾಪ್ತಿಯ ವಂದಲಿ ಹೊಸೂರಲ್ಲಿ ನಡೆದಿರುವ ಜಲಜೀವನ್ ಮಿಷನ್ ಕಾಮಗಾರಿಯನ್ನು ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್ ಪರಿಶೀಲಿಸಿದರು.
Published on

ಹಟ್ಟಿಚಿನ್ನದಗಣಿ: ವಿವಿಧ ಗ್ರಾಪಂಗಳ ವ್ಯಾಪ್ತಿಯಲ್ಲಿ ನಡೆದಿರುವ ನಾನಾ ಕಾಮಗಾರಿಗಳ ಸ್ಥಳಗಳಿಗೆ ಶನಿವಾರ ಭೇಟಿ ನೀಡಿದ ಜಿಪಂ ಸಿಇಒ ಶೇಖ್ ತನ್ವಿರ್‌ಆಸೀಫ್, ಕೆಲಸ ಪರಿಶೀಲನೆ ನಡೆಸಿದರು.

ಆನ್ವರಿ ಗ್ರಾಪಂನ ವಂದಲಿ ಹೊಸೂರಿನಲ್ಲಿ ನಡೆದಿರುವ ಜಲಜೀವನ್ ಮಿಷನ್, ಗೆಜ್ಜಲಗಟ್ಟಾ ಪಂಚಾಯಿತಿ ವ್ಯಾಪ್ತಿಯ ವೀರಾಪುರದಲ್ಲಿನ ನರೇಗಾ, ಗೌಡೂರು ಗ್ರಾಪಂನ ಮಾಚನೂರಲ್ಲಿ ನಡೆದಿರುವ ಕುಡಿವ ನೀರು, ಕೆರೆ ಹೂಳೆತ್ತುವ ಕಾಮಗಾರಿ ವೀಕ್ಷಿಸಿದರು. ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಿಕೊಡಲು ತಾಕೀತು ಮಾಡಿದರು. ನರೇಗಾ ಕೆಲಸಗಳ ಗುಣಮಟ್ಟ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಲಿಂಗಸುಗೂರು ಉಪವಿಭಾಗದ ಎಇಇ ಶಿವಕುಮಾರ್, ಜೆಇ ರಮೇಶ್, ತಾಪಂ ಇಒ ಲಕ್ಷ್ಮೀದೇವಿ, ಸಮನ್ವಯಾಧಿಕಾರಿ ಮೆಹಬೂಬ್, ಪಿಡಿಒಗಳಾದ ಅಮರಗುಂಡಮ್ಮ, ಜ್ಯೋತಿ ಡಿ. ಭವಾನಿ, ಮಹ್ಮದ್ ಇಸಾಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net