ಸಮರ್ಪಕ ವಿದ್ಯುತ್ ಪೂರೈಸುವಂತೆ ಹುಡಾ, ಹೀರಾ-ಬುದ್ಧಿನ್ನಿ ಸೇರಿ ಹಟ್ಟಿ ಸುತ್ತಲಿನ ಗ್ರಾಮಸ್ಥರ ಒತ್ತಾಯ

Hutti Villagers Appeal for Power
ಕೃಷಿ ಪಂಪಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಕಲ್ಪಿಸಬೇಕೆಂದು ಒತ್ತಾಯಿಸಿ ಹಟ್ಟಿ ಸುತ್ತಲಿನ ಗ್ರಾಮಸ್ಥರು ಕೆಪಿಟಿಸಿಎಲ್ ಎಇಇ ಮಲ್ಲಿಕಾರ್ಜುನ ಹಾಗೂ ಜೆಸ್ಕಾಂ ವಿಭಾಗೀಯ ಅಧಿಕಾರಿ ಬಸಪ್ಪಗೆ ಮನವಿ ಸಲ್ಲಿಸಿದರು.
Published on

ಹಟ್ಟಿಚಿನ್ನದಗಣಿ: ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಕಲ್ಪಿಸಬೇಕೆಂದು ಚಿಂಚರಕಿ, ಹುಡಾ, ಹೀರಾ-ಬುದ್ಧಿನ್ನಿ ಸೇರಿ ಹಟ್ಟಿ ಸುತ್ತಲಿನ ಗ್ರಾಮಸ್ಥರು ಹಟ್ಟಿಚಿನ್ನದಗಣಿ ಕೆಪಿಟಿಸಿಎಲ್ ಎಇಇ, ಜೆಸ್ಕಾಂ ವಿಭಾಗೀಯ ಅಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.

ಮೂರು ತಿಂಗಳಿಂದ ಅನಿಯಮಿತ ಲೋಡ್‌ಶೆಡ್ಡಿಂಗ್‌ನಿಂದ ತೀವ್ರ ತೊಂದರೆಯಾಗಿದೆ. ಬೆಳೆಗಳಿಗೆ ನೀರು ಪೂರೈಕೆಯಾಗದ ಪರಿಣಾಮ ಬೆಳೆಗಳು ಒಣಗುತ್ತಿವೆ. ವೋಲ್ಟೇಜ್‌ನಲ್ಲಿ ವ್ಯತ್ಯಯವಾಗುವುದರಿಂದ ಮೋಟಾರ್‌ಗಳು ಸುಟ್ಟು ಹೋಗುತ್ತಿವೆ. ಇದರಿಂದ ಸಮಸ್ಯೆಯಾಗುತ್ತಿದೆ ಎಂದು ರೈತರಾದ ಮೋನಯ್ಯ, ನಬೀಸಾಬ್, ಪರಪ್ಪ, ಬಸವರಾಜ್, ಬಸನಗೌಡ ದೂರಿದರು.

ಕೆಪಿಟಿಸಿಎಲ್ ಎಇಇ ಮಲ್ಲಿಕಾರ್ಜುನ ಹಾಗೂ ಜೆಸ್ಕಾಂ ವಿಭಾಗೀಯ ಅಧಿಕಾರಿ ಬಸಪ್ಪ ಮನವಿ ಸ್ವೀಕರಿಸಿ, ಸಮರ್ಪಕ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net