ಪಾರ್ವತಿ ನಿಂಗಪ್ಪ ಹಟ್ಟಿ ಪಪಂ ಅಧ್ಯಕ್ಷೆ

23052022 Hutti town panchayat
Published on

ಹಟ್ಟಿಚಿನ್ನದಗಣಿ: ರಾಜಕೀಯ ಮೇಲಾಟದ ನಡುವೆ ಹಟ್ಟಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆಯಾಗಿ ಪಾರ್ವತಿ ನಿಂಗಪ್ಪ ಮನಗೂಳಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷೆ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಪಾವರ್ತಿ ನಿಂಗಪ್ಪ ಅವಿರೋಧ ಆಯ್ಕೆಯನ್ನು ತಹಸೀಲ್ದಾರ್ ಬಲರಾಮ ಕಟ್ಟಿಮನಿ ಪ್ರಕಟಿಸಿದರು. ನಾಗರತ್ನಾ ಶರಣಗೌಡ ಗುರೀಕರ್ ಉಪಾಧ್ಯಕ್ಷೆಯಾಗಿ ಮುಂದುವರಿದಿದ್ದಾರೆ.

ಈ ಹಿಂದಿನ ಅಧ್ಯಕ್ಷೆ ವಿಜ್ಜಮ್ಮರ ವಿರುದ್ಧ ಏ.13ರಂದು ಅವಿಶ್ವಾಸ ಮಂಡಿಸಲಾಗಿತ್ತು. ಹಟ್ಟಿ ಪಪಂ ಆಗಿ ಮೇಲ್ದರ್ಜೆಗೇರಿದ ಬಳಿಕ ಚೊಚ್ಚಲ ಚುನಾವಣೆಯಲ್ಲಿ 8 ಕಾಂಗ್ರೆಸ್, 3 ಜೆಡಿಎಸ್, 2 ಪಕ್ಷೇತರ ಸದಸ್ಯರು ಜಯಗಳಿಸಿದ್ದರು. ಕಾಂಗ್ರೆಸ್‌ಗೆ ಸರಳ ಬಹುಮತವಿದ್ದರೂ ಲಿಂಗಸುಗೂರು ಶಾಸಕ ಡಿ.ಎಸ್.ಹೂಲಗೇರಿ ಹಾಗೂ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಬಣದ ನಡುವಿನ ಮುಸುಕಿನ ಗುದ್ದಾಟದಿಂದ ಜೆಡಿಎಸ್‌ಗೆ ಉಪಾಧ್ಯಕ್ಷ ಸ್ಥಾನ ನೀಡಿ, ಬಯ್ಯಪುರ ಬಣದ ವಿಜ್ಜಮ್ಮ ನಾಗರೆಡ್ಡಿ ಜೇರಬಂಡಿ (ಸಾಮಾನ್ಯ ಮಹಿಳೆ)ಗೆ ಅಧ್ಯಕ್ಷೆ ಸ್ಥಾನ ಹಾಗೂ ಜೆಡಿಎಸ್ ನಾಗರತ್ನಾ ಶರಣಗೌಡ ಗುರಿಕಾರರನ್ನು (ಸಾಮಾನ್ಯ) ಉಪಾಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net