

ನಾಪೋಕ್ಲು: ಸ್ಥಳೀಯ ಕೊಡವ ಸಮಾಜದಲ್ಲಿ ಇತ್ತೀಚೆಗೆ ಹುತ್ತರಿ ಹಬ್ಬವನ್ನು ಶ್ರದ್ಧಾಭಕ್ತಿ ಸಾಂಪ್ರದಾಯಿಕವಾಗಿ ಆಚರಿಸಲಾಯಿತು.
ಕೊಡವ ಸಮಾಜದಲ್ಲಿ ಮೊದಲು ನೆರೆಕಟ್ಟಿದ ಬಳಿಕ ಪ್ರಾರ್ಥನೆ ಮಾಡಿ ಸಮಾಜ ಗದ್ದೆಗೆ ತೆರಳಲಾಯಿತು. ಬೊಟ್ಟೋಳಂಡ ರಾಜ ಭೋಜಪ್ಪ ಗದ್ದೆಯಲ್ಲಿ ಶಾಸ್ತ್ರೋತ್ರವಾಗಿ ಭತ್ತದ ಕದಿರನ್ನು ತೆಗೆದು ಹುತ್ತರಿ ಕುತ್ತಿಯಲ್ಲಿ ಇರಿಸಿ ಮದ್ದುಗಳ ಆರ್ಭಟ ಹಾಗೂ ಪೊಲಿ ಪೊಲೀಯೇ ಬಾ ಉದ್ಘೋಷಗಳೊಂದಿಗೆ ಸಮಾಜಕ್ಕೆ ಹಿಂದಿರುಗಲಾಯಿತು. ನಂತರ ಸಾಂಪ್ರದಾಯದಂತೆ ಆಗಮಿಸಿದವರಿಗೆ ಕದಿರು ವಿತರಿಸಲಾಯಿತು. ನಂತರ ಎಲ್ಲರೂ ಊಟೋಪಚಾರಗಳನ್ನು ಮುಗಿಸಿದ ಬಳಿಕ ಕದಿರಿನೊಂದಿಗೆ ತಮ್ಮ ತಮ್ಮ ಮನೆಗೆ ತೆರಳಿ ಹಬ್ಬವನ್ನು ಆಚರಿಸಿದರು.
ಈ ಸಂದರ್ಭ ಬೊಟ್ಟೋಳಂಡ ಗಣೇಶ, ಕನ್ನಂಬೀರ ಸುದೀಪ್ ತಿಮ್ಮಯ್ಯ, ಮನವಟ್ಟಿರ ಡಿಕ್ಕ, ಕರ್ತಮಾಡ ವಿಜು, ಬೊಟ್ಟೋಳಂಡ ಚೇತನ್ ಇನ್ನಿತರರು ಇದ್ದರು.