ಉಲುಗಲಿ ಗ್ರಾಮದಲ್ಲಿ ಪುತ್ತರಿ ಹಬ್ಬ

IMG-20231128-WA0121
Published on

ಸುಂಟಿಕೊಪ್ಪ: ಉಲುಗಲಿ ಗ್ರಾಮಕ್ಕೆ ಸೇರಿದ ಪನ್ಯದ ಮಳೂರು ಬಳ್ಳಾರಿ ಕಮ್ಮ ದೇವಾಲಯದ ಗದ್ದೆಯಲ್ಲಿ ಪೂಜಾ ವಿಧಿವಿಧಾನಗಳೊಂದಿಗೆ ಹಿರಿಯರಾದ ಮಿಟ್ಟು ಅವರ ನೇತೃತ್ವದಲ್ಲಿ ಕದಿರು ತೆಗೆಯುವುದರ ಮೂಲಕ ಸೋಮವಾರ ಪುತ್ತರಿ ಹಬ್ಬವನ್ನು ಆಚರಿಸಲಾಯಿತು. ಸಮೀಪದ ಗದ್ದೆಹಳ್ಳದ ಪಟ್ಟೆಮನೆ ಕುಟುಂಬಸ್ಥರು ಐನ್ ಮನೆಯಲ್ಲಿ ಸೇರಿ ಪೂಜಾ ವಿಧಿವಿಧಾನಗಳನ್ನು ನಡೆಸಿ ನಂತರ ಗದ್ದೆಗೆ ಬಂದು ತೆನೆಗೆ ಪೂಜೆ ಸಲ್ಲಿಸಿ ಕದಿರು ತೆಗೆದರು. ಈ ಸಂದರ್ಭದಲ್ಲಿ ಧನು ಕಾವೇರಪ್ಪ, ರಾಕೇಶ್, ಬಿ.ಕೆ.ಮೋಹನ್, ಲಕ್ಷ್ಮಣ್, ದಿನು ದೇವಯ್ಯ, ಸುರೇಶ್ ಗೋಪಿ, ಬಿ.ಎಂ.ಸುರೇಶ್, ಪಟ್ಟೆಮನೆ ಉದಯಕುಮಾರ್, ಪಟ್ಟೆಮನೆ ಲೋಕೇಶ್, ಪಟ್ಟೆಮನೆ ಅನಿಲ್ಕುಮಾರ್ ಸೇರಿದಂತೆ ಹಲವು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net