ಹುಸೇನಿ ಆಲಂ ದರ್ಗಾ ಹುಂಡಿ ಎಣಿಕೆ

16 MDL 01
ಮುದಗಲ್‌ನ ಹಜರತ್ ಹುಸೇನಿ ಆಲಂ ದರ್ಗಾದ ಹುಂಡಿ ಹಣ ಎಣಿಕೆ ಮಾಡಲಾಯಿತು. ಖಜಾಂಚಿ ಗಾಯಾಸುದ್ಧಿನ್, ಅಧ್ಯಕ್ಷ ಅಮೀರ್ ಬೇಗ ಉಸ್ತಾದ, ಉಪಾಧ್ಯಕ್ಷ ಮಸೂಮ್ ಶರೀಫ್, ಪ್ರಮುಖರಾದ ಖಾಜಾ ಮಂಡಿ, ಶಂಶಾಲಂ, ರಹೇಮನ್ ಅರಬ್, ರಾಯಚೂರು ವಕ್ಫ್ ನೌಕರ ಎಂ.ಡಿ.ಇರ್ಷಾದ್ ಇತರರಿದ್ದರು.
Published on

ಮುದಗಲ್: ಪಟ್ಟಣದ ಕಿಲ್ಲಾ ದ ಹಜರತ್ ಹುಸೇನಿ ಆಲಂ ದರ್ಗಾದ ಹುಂಡಿ ಹಣ ಎಣಿಕೆ ಇತ್ತೀಚೆಗೆ ನಡೆಯಿತು. ಒಟ್ಟು 12,23,158 ರೂ. ಸಂದಾಯವಾಗಿದೆ. ಭಕ್ತರು ಹರಕೆ ಸಲ್ಲಿಸಿದ ದೇವರ ದಟ್ಟಿ ರೂ.58,000, ಬೆಳ್ಳಿ 1ಕೆ.ಜಿ 160ಗ್ರಾಂ, ಹಾಗೂ ಭಕ್ತರು ಕಾಣಿಕೆ ರೂಪದಲ್ಲಿ ನೀಡಿ 91,000 ರೂ.ಯನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ದರ್ಗಾ ಸಮಿತಿ ಕಾರ್ಯದರ್ಶಿ ಸಾಧಿಕ್ ಅಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net