

ಹೂವಿನಹಡಗಲಿ: ತಾಲೂಕಿನ ಕುರುವತ್ತಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಮತ್ತು ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ಹುಂಡಿ ಹಣ ಎಣಿಕೆ ಮಾಡಿದ್ದು, 27,61,945 ರೂ. ಸಂಗ್ರಹವಾಗಿದೆ. ಕಾಣಿಕೆ ನಡುವೆ ಭಕ್ತೆ ಬರೆದ ಪತ್ರವೊಂದು ದೊರೆತಿದ್ದು, ಗಮನ ಸೆಳೆಯುತ್ತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ವೈರಲ್ ಆಗಿದೆ.
ಪತ್ರದಲ್ಲಿ ಏನಿದೆ?: ‘ಯಾವಾಗಲು ನೇರವಾಗಿ ಬೇಡಿಕೊಳ್ಳತ್ತಿದ್ದ ನಾನು ಈ ಸಾರಿ ನಿನಗೆ ಪತ್ರದ ಮೂಲಕ ಬೇಡಿಕೊಳ್ಳುತ್ತಿದ್ದೇನೆ. ನಾವು ಮನುಷ್ಯರು, ಎಷ್ಟೇ ಕೊಟ್ಟರೂ ಮತ್ತಷ್ಟು ಬೇಕು ಎನಿಸುತ್ತದೆ. ನಾನು ಕಟ್ಟಿಕೊಂಡ ಹರಕೆಗಳನ್ನು ನೀನು ಈಡೇರಿಸಿದ್ದಿ.
ಆದರೆ ನಾವು ಮನುಷ್ಯರಾಗಿದ್ದು, ನಮಗೆ ತೃಪ್ತಿ ಎಂಬುದೇ ಇಲ್ಲ. ನನ್ನ ಪತಿ ಇಚ್ಛಿಸಿದಂತೆ ಅವರಿಗೊಂದು ಕೆಲಸವನ್ನು ಆದಷ್ಟು ಬೇಗ ಕರುಣಿಸು. ನಿತ್ಯವೂ ನಿನ್ನ ಹರಕೆ ತೀರಿಸುತ್ತೇನೆ’ ಎಂದು ಪತ್ರದಲ್ಲಿ ಬರೆದಿದ್ದು, ಹೆಸರು ಊರು ಹಾಕಿಲ್ಲ. ಈ ಪತ್ರ ಸಾಮಾಜಿ ಜಾಲತಾಣಗಳಲ್ಲಿ ಹರಿದಾಡುವ ಮೂಲಕ ಗಮನ ಸೆಳೆಯುತ್ತಿದೆ.