ಪತಿ-ಪತ್ನಿ ವರ್ಗಾವಣೆಗೆ ಅಸ್ತು: ಸಿ, ಡಿ ವರ್ಗದ ಸಿಬ್ಬಂದಿಗೆ ಸಿಹಿಸುದ್ದಿ, ವಿಜಯವಾಣಿ ವರದಿಗೆ ಸ್ಪಂದನೆ

Vidhana
Published on

ಬೆಂಗಳೂರು: ಸರ್ಕಾರದ ಎಲ್ಲ ಇಲಾಖೆಗಳ ಸಿ ಮತ್ತು ಡಿ ವರ್ಗದ ನೌಕರರ ಪತಿ&ಪತ್ನಿ ಪ್ರಕರಣದಲ್ಲಿ ಸೇವಾ ಜೇಷ್ಠತೆ ಬಿಟ್ಟುಕೊಟ್ಟು ಅಂತರ್​ ಜಿಲ್ಲಾ ವರ್ಗಾವಣೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಮೂಲಕ ನೌಕರರ ಸಂಕಷ್ಟವನ್ನು ತೆರೆದಿಟ್ಟಿದ್ದ ವಿಜಯವಾಣಿ ಸರಣಿ ವರದಿಗೆ ಸರ್ಕಾರ ಸ್ಪಂದನೆ ನೀಡಿದೆ.

ಎರಡು ವರ್ಷಗಳ ಹಿಂದೆ ಈ ರೀತಿಯ ವರ್ಗಾವಣೆಗೆ ಸರ್ಕಾರ ಕಡಿವಾಣ ಹಾಕಿತ್ತು. ಆದರೆ, ಈಗ ನೌಕರರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಈ ವರ್ಗಾವಣೆಗೆ ಒಪ್ಪಿಗೆ ಸೂಚಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​, ಗೃಹ ಇಲಾಖೆಯಲ್ಲಿ ಏಳು ವರ್ಷ, ಶಿಣ ಇಲಾಖೆಯಲ್ಲಿ ಐದು ವರ್ಷ ಕನಿಷ್ಠ ಸೇವೆ ಸಲ್ಲಿಸಿದವರನ್ನು ಮಾತ್ರ ಪತಿ&ಪತ್ನಿ ವರ್ಗಾವಣೆಗೆ ಪರಿಗಣಿಸಲಾಗುತ್ತಿತ್ತು. ಆದರೆ, ಅದನ್ನು ಈಗ ಎಲ್ಲ ಇಲಾಖೆಗಳಿಗೂ ಅನ್ವಯಿಸಲಾಗಿದೆ. ಜಿಲ್ಲಾಮಟ್ಟದಲ್ಲಿ ಸೇವಾ ಜೇಷ್ಠತೆ ಪರಿಗಣಿಸುತ್ತಿದ್ದುದರಿಂದ ಪತಿ&ಪತ್ನಿ ವರ್ಗಾವಣೆ ಕಷ್ಟವಾಗಿತ್ತು. ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ವರ್ಗಾವಣೆಯಾಗಿ ಬರಬೇಕಾದರೆ ಸೇವಾ ಜೇಷ್ಠತೆ ಅಡ್ಡಿಯಾಗುತ್ತಿತ್ತು. ಈಗ ಸಂಪುಟ ಸಭೆ ರ್ನಿಣಯದಿಂದ ಪತಿ&ಪತ್ನಿ ವರ್ಗಾವಣೆಗೆ ಕಾಯುತ್ತಿದ್ದವರಿಗೆ ನಿರಾಳ ಸಿಕ್ಕಂತಾಗಿದೆ ಎಂದರು.

ಗೃಹ ಇಲಾಖೆ, ಗ್ರಾಮ ಲೆಕ್ಕಿಗರು, ಗ್ರಾಮ ಪಂಚಾಯತ್​ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ಈ ವರ್ಗಾವಣೆಯಿಂದ ಹೆಚ್ಚು ಪ್ರಯೋಜನವಾಗಲಿದೆ. ಅಂದಾಜು 5 ರಿಂದ 6 ಸಾವಿರ ನೌಕರರು ಈ ರೀತಿಯ ವರ್ಗಾವಣೆಗೆ ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

10-15 ವರ್ಷವಾದರೂ ಕಷ್ಟ: ಜಿಲ್ಲಾಮಟ್ಟದಲ್ಲಿ ಸೇವಾ ಜೇಷ್ಠತೆಯನ್ನು ಪರಿಗಣಿಸುತ್ತಿದ್ದ ಕಾರಣ ಕೆಲವು ನೌಕರರು ಪತಿ&ಪತ್ನಿ ಪ್ರಕರಣದಲ್ಲಿ 10&15 ವರ್ಷಗಳಾದರೂ ಅಂತರ್​ ಜಿಲ್ಲಾ ವರ್ಗಾವಣೆ ಆಗುತ್ತಿರಲಿಲ್ಲ. ಅದಕ್ಕೆ ಈಗ ದೊಡ್ಡ ಪರಿಹಾರವನ್ನು ಸರ್ಕಾರ ನೀಡಿದೆ.

ನಿಬಂಧನೆಗಳು ಅನ್ವಯ: ಆಯಾ ಇಲಾಖೆಗಳು ಪತಿ&ಪತ್ನಿ ವರ್ಗಾವಣೆ ವಿಚಾರದಲ್ಲಿ ಕನಿಷ್ಠ ಸೇವೆಯ ನಿಯಮಗಳಿಗೆ ಅನುಗುಣವಾಗಿ ಈ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸುಧಾಕರ್​ ಮಾಹಿತಿ ನೀಡಿದ್ದಾರೆ.

ನಿಯಮ ರದ್ದಾಗಿತ್ತು ಸಿ ಮತ್ತು ಡಿ ದರ್ಜೆಯ ನೌಕರರನ್ನು ಒಂದು ಜೇಷ್ಠತಾ ಟಕದಿಂದ ಇನ್ನೊಂದು ಟಕದ ಸಮಾನ ಹುದ್ದೆಗೆ ಸ್ವಂತ ಕೋರಿಕೆ ಮೇರೆಗೆ ವರ್ಗಾವಣೆಗೊಳಿಸಲು ಇಲಾಖಾ ಮುಖ್ಯಸ್ಥರಿಗೆ ಅಧಿಕಾರವಿತ್ತು. ಆದರೆ, ಕರ್ನಾಟಕ ನಾಗರಿಕ ಸೇವಾ (ತಿದ್ದುಪಡಿ) ನಿಯಮ 2021 ಹೊರಡಿಸುವ ಮೂಲಕ ಸ್ವಂತ ಕೋರಿಕೆ ವರ್ಗಾವಣೆಗೆ ಅವಕಾಶವಿದ್ದ 16 (ಎ) ನಿಯಮ ಕಾಯ್ದೆಯಿಂದ ತೆಗೆದುಹಾಕಲಾಗಿತ್ತು. ಇದರಿಂದ ಸರ್ಕಾರಿ ನೌಕರರಾಗಿರುವ ಪತಿ&ಪತ್ನಿ ಅವರ ಸೇವಾವಧಿ ಪೂರ್ತಿ ಒಂದೇ ಜಿಲ್ಲೆ ಅಥವಾ ಟಕಕ್ಕೆ ವರ್ಗಾವಣೆಗೊಂಡು ಒಟ್ಟಿಗೆ ಕೆಲಸ ಮಾಡಲೂ ಅವಕಾಶ ಇಲ್ಲವಾಗಿತ್ತು.

ಸೇವಾ ಜ್ಯೇಷ್ಠತೆ ಬಿಟ್ಟುಕೊಟ್ಟು ಪತಿ&ಪತ್ನಿ ಪ್ರಕರಣದಲ್ಲಿ ಅಂತರ್​ ಜಿಲ್ಲಾ ವರ್ಗಾವಣೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿರುವುದು ಸ್ವಾಗತಾರ್ಹ. ಇದರಿಂದ ಸಾವಿರಾರು ನೌಕರರಿಗೆ ಅನುಕೂಲವಾಗಲಿದೆ. ಸಿ.ಎಸ್​.ಷಡಾರಿ ಸರ್ಕಾರಿ ನೌಕರರ ಸಂದ ಅಧ್ಯ

43 ಪಿಎಚ್​ಸಿ ಮೇಲ್ದರ್ಜೆಗೆ

2022&23 ನೇ ಸಾಲಿನ ಬಜೆಟ್​ನಲ್ಲಿ ಸರ್ಕಾರ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದಾಗಿ ಘೋಷಿಸಿತ್ತು. ಆ ಪೈಕಿ ಈಗ 43 ಪಿಎಚ್​ಸಿಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಐದು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪಿಎಂ ಅಭೀಮ್​ ಯೋಜನೆಯಡಿ 56 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತದೆ. 38 ಪಿಎಚ್​ಸಿಗಳನ್ನು ಮೇಲ್ದರ್ಜೆಗೇರಿಸಲು 397 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗುತ್ತದೆ ಎಂದು ಸಚಿವ ಡಾ.ಕೆ. ಸುಧಾಕರ್​ ತಿಳಿಸಿದರು.

ಆರೋಗ್ಯ ವಿವಿಗೆ 600 ಕೋಟಿ ರೂ.

ರಾಮನಗರದಲ್ಲಿ ರಾಜೀವ್​ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಕ್ಯಾಂಪಸ್​, ಕಾಲೇಜು ನಿರ್ಮಾಣಕ್ಕೆ ಈವರೆಗೆ ಪ್ರಯತ್ನ ನಡೆದಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈಗ ಸರ್ಕಾರ ಅರ್ಚಕರಹಳ್ಳಿಯಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ವಿವಿ ಕ್ಯಾಂಪಸ್​ ಹಾಗೂ ಇತರ ಪೂರಕ ಕಟ್ಟಡ ನಿರ್ಮಿಸಲು ಆಡಳಿತಾತ್ಮಕ ಅನುಮತಿ ನೀಡಿದೆ. ಈ ಕಟ್ಟಡವನ್ನು ಇಲಾಖೆಯ ಇಂಜಿನಿ ಯರಿಂಗ್​ ವಿಭಾಗ ನಿರ್ಮಿಸಲಿದೆ ಎಂದು ಸಚಿವ ಸುಧಾಕರ್​ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net