ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡ !

kdr crime
Published on

ಕಡೂರು: ತಾಲೂಕಿನ ಕಂಸಾಗರ ಗೇಟ್ ಸಮೀಪ ಗೋಮಾಳ ಪ್ರದೇಶದಲ್ಲಿ ಜೂ.3ರಂದು ಪತ್ತೆಯಾದ ಮೃತದೇಹದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಮೂವರು ಆರೋಪಿಗಳನ್ನು ಕಡೂರು ಪೊಲೀಸರು ವಶಕ್ಕೆ ಪಡಿಸಿಕೊಂಡಿದ್ದಾರೆ. ಪಟ್ಟಣದ ಕೋಟೆ ಪ್ರದೇಶದ ವಾಸಿಗಳಾದ ಪ್ರದೀಪ್ ಆಚಾರ್, ಸಿದ್ದೇಶ್ ಹಾಗೂ ವಿಶ್ವಾಸ್ ಬಂಧಿತ ಆರೋಪಿಗಳು.

ಮೇ.31ರಂದು ಪತಿ ಸುಬ್ರಹ್ಮಣ್ಯ(ಕೊಲೆಯಾದ ವ್ಯಕ್ತಿ) ಕಾಣೆಯಾಗಿದ್ದಾರೆ ಎಂದು ಪತ್ನಿ ಮೀನಾಕ್ಷಮ್ಮ ಕಡೂರು ಠಾಣೆಗೆ ಜೂ.2ರಂದು ದೂರು ಸಲ್ಲಿಸಿದ್ದರು. ಜೂ.3ರಂದು ಕಂಸಾಗರ ಗೇಟ್‌ಸಮೀಪ ಗುರುತು ಹಿಡಿಯದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಎಫ್‌ಎಸ್‌ಎಲ್ ತಂಡದ ತಜ್ಞರು ಆಗಮಿಸಿ ಮೃತ ವ್ಯಕ್ತಿಯ ಕಾಲಿನ ಭಾಗದ ಸಹಾಯದಿಂದ ಎರಡೂ ಪ್ರಕರಣಗಳನ್ನು ಪರಿಶೀಲಿಸಿ ಕಾಣೆಯಾದ ಮತ್ತು ಪತ್ತೆಯಾದ ಸುಟ್ಟ ಶವ ಒಂದೇ ಎಂದು ತಿಳಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದರು.

ಮೃತ ಸುಬ್ರಹ್ಮಣ್ಯ(60)ನ ಪತ್ನಿಯೊಡನೆ ಪ್ರದೀಪ್ ಆಚಾರ್ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇದನ್ನು ತಿಳಿದ ಸುಬ್ರಹ್ಮಣ್ಯ ಪತ್ನಿಜತೆ ಜಗಳಮಾಡಿ ಏಳೆಂಟು ತಿಂಗಳ ಹಿಂದೆ ಅಕ್ರಮಕ್ಕೆ ಬ್ರೇಕ್‌ಹಾಕಿದ್ದ ಇದರಿಂದ ಕುಪಿತಗೊಂಡಿದ್ದ ಪ್ರದೀಪ್ ಆಚಾರ್ ಸುಬ್ರಹ್ಮಣ್ಯನನ್ನು ಕೊಲೆ ಮಾಡಲು ನಿರ್ಧರಿಸಿ ಮೇ.31ರಂದು ಕೆಲಸ ನೆಪಹೇಳಿ ಕಾರ್‌ನಲ್ಲಿ ಚಿಕ್ಕಮಗಳೂರಿಗೆ ಕರೆದೊಯ್ದಿದ್ದಾರೆ. ಬಳಿಕ ಸಂಜೆ ವೇಳೆ ಬುಕ್ಕಸಾಗರ ಗೇಟ್ ಬಳಿಯ ನಿರ್ಜನ ಪ್ರದೇಶದಲ್ಲಿ ಮದ್ಯ ಸೇವಿಸಿ ಹಗ್ಗದಿಂದ ಸುಬ್ರಹ್ಮಣ್ಯನನ್ನು ಕೊಲೆ ಪೆಟ್ರೋಲ್ ಹಾಕಿ ಕಂಸಾಗರ ಗೇಟ್ ಬಳಿ ಮೃತ ದೇಹವನ್ನು ಸುಟ್ಟುಹಾಕಿರುವುದಾಗಿ ಒಪ್ಪಿಕೊಂಡಿದ್ದಾರೆ.

ಕಾರ್ಯಚರಣೆಯಲ್ಲಿ ಕಡೂರು ವೃತ್ತ ನಿರೀಕ್ಷಕ ರಫೀಕ್ ಪಿಎಸೈಗಳಾದ ಪವನ್ ಕುಮಾರ್ , ಡಿ.ಎಚ್.ಧನಂಜಯ ಹಾಗೂ ಲೀಲಾವತಿ, ಎಎಸ್‌ಐ ವೇದಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net