

ಚಿಕ್ಕಬಳ್ಳಾಪುರ: ಮದುವೆಯಾಗಿ ವಂಚಿಸಿದ ಹೆಂಡತಿಯ ವಿರುದ್ಧ ಗಂಡನೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಪರಸ್ಪರ ಆರೋಪ ಪ್ರತ್ಯಾರೋಪಗಳು ಕೇಳಿ ಬಂದಿವೆ.
ಬೆಳಗಾವಿಯ ಜಿಲ್ಲೆಯ 33 ವರ್ಷದ ಯುವತಿ ಆರೋಪಿ. ಈಕೆ ಮೂರು ಮದುವೆಯಾಗಿದ್ದಾಳೆ ಎನ್ನಲಾಗಿದೆ. ಇದರ ನಡುವೆ ಪರಸ್ಪರ ವಂಚನೆಯ ಆರೋಪದ ಗಲಾಟೆಯು ದೊಡ್ಡ ಹೈಡ್ರಾಮ್ಗೆ ಸಾಕ್ಷಿಯಾಗಿದೆ. ಇದೀಗ ಎರಡನೇ ಪತಿ ಶಿಡ್ಲಘಟ್ಟದ ಮುನಿರಾಜು ವಂಚನೆಗೊಳಗಾಗಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
*ಪ್ರಕರಣದ ಹಿನ್ನೆಲೆ
ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯೊಂದಿಗೆ ಎಂಟು ತಿಂಗಳಿಂದ ಮುನಿರಾಜು ವಾಸಿಸುತ್ತಿದ್ದ. ಇದರ ನಡುವೆ ಬೆಳಗಾವಿಯಲ್ಲಿನ ಮದುವೆಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದ ಆರೋಪಿ, ಅಲ್ಲಿ ಪೊಲೀಸ್ ಠಾಣೆಯಲ್ಲಿ ಕಿರುಕುಳದ ಬಗ್ಗೆ ದೂರು ದಾಖಲಿಸಿದ್ದಳು. ಆಸ್ತಿಗಾಗಿ ಕೂಡಿ ಹಾಕಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದ್ದಾಳೆ. ಇತ್ತ ಆರೋಪಿ ಶಿಡ್ಲಟ್ಟ ಠಾಣೆಯಲ್ಲಿ ಸುಳ್ಳು ಆರೋಪ ಮತ್ತು ವಂಚನೆಯ ಬಗ್ಗೆ ದೂರು ನೀಡಿದ್ದಾನೆ.
*ಯುವತಿಗೆ ಮೂರು ಮದುವೆ?
ಈಗಾಗಲೇ ಆರೋಪಿ ಯುವತಿಗೆ ಮೂರು ಮದುವೆಯಾಗಿದೆ. ಮೊದಲು ಚಿಕ್ಕಬಳ್ಳಾಪುರದ ಮುನಿರಾಜು, ಬಳಿಕ ಶಿಡ್ಲಟ್ಟ ಸುಧಾಕರ್ ಜತೆಗೆ ಮದುವೆಯಾಗಿದ್ದು ಇದೀಗ ಬೆಳಗಾವಿ ಮೂಲದ ರೋಹಿತ್ ಎಂಬಾತನನ್ನು ಮೂರನೇ ಮದುವೆಯಾಗಿದ್ದಾಳೆ ಎನ್ನಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.