ಹೆಂಡತಿಯನ್ನು ಕೊಂದು ಪೊಲೀಸರಿಗೆ ಶರಣಾದ ಗಂಡ; 3 ವರ್ಷ ಹಾಗೂ 8 ತಿಂಗಳ ಮಕ್ಕಳಿಬ್ಬರಿಗೆ ಇನ್ನಿಲ್ಲ ತಾಯಿ

Murder
Published on

ಉತ್ತರಕನ್ನಡ: ಹೆಂಡತಿಯನ್ನು ಕೊಂದ ವ್ಯಕ್ತಿಯೊಬ್ಬ ಬಳಿಕ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಯಡೋಗ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ.

ಅರ್ಪಣಾ ರಾಜಕುಮಾರ ಕುಂದೇಕರ (22) ಕೊಲೆಯಾದ ದುರ್ದೈವಿ. ಈಕೆಯ ಪತಿ ರಾಜಕುಮಾರ ಕುಂದೇಕರ ಕೊಲೆ ಆರೋಪಿ. ಕ್ಷುಲ್ಲಕ ಕಾರಣಕ್ಕೆ ಹೆಂಡತಿಗೆ ಚಾಕು ಇರಿದು ಹತ್ಯೆ ಮಾಡಿದ ಬಳಿಕ ಈತ ಹಳಿಯಾಳ ಪೊಲೀಸರಿಗೆ ಶರಣಾಗಿದ್ದಾನೆ.

ಐದು ವರ್ಷಗಳ ಹಿಂದೆ ಮದುವೆಯಾಗಿದ್ದ ಈ ದಂಪತಿಗೆ ಮೂರು ವರ್ಷದ ಗಂಡು ಹಾಗೂ 8 ತಿಂಗಳ ಹೆಣ್ಣು ಮಗುವಿದೆ. ಆದರೆ ಈಗ ತಂದೆಯ ಈ ದುಷ್ಕೃತ್ಯದಿಂದಾಗಿ ಮಕ್ಕಳು ತಾಯಿಯನ್ನು ಕಳೆದುಕೊಂಡಿದ್ದಾರೆ.

ಸ್ಥಳಕ್ಕೆ ಹಳಿಯಾಳ ಸಿಪಿಐ ರಂಗನಾಥ ನೀಲಮ್ಮನವರ, ಪಿಎಸ್​ಐ ಶಿವಾನಂದ ನಾವದಗಿ ಮುಂತಾದವರು ಭೇಟಿ ನೀಡಿದ್ದು, ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net