ಮಲ್ಲಿಕಾರ್ಜುನ ತನ್ನ ಪತ್ನಿ ಗಿರಿಜಮ್ಮ ಅವರನ್ನು ಸ್ಕೂಟ್ ಮೇಲೆ ಕುಂದರಿಸಿಕೊಂಡು ದೇವಗೊಂಡನಕಟ್ಟಿಯಿಂದ ದಾವಣಗೆರೆಗೆ ಹರ್ಬಲ್ ಲೈಫ್ ಮಿಟಿಂಗ್ ಗೆ ತೆರಳುತ್ತಿದ್ದ. ಈ ಸಮಯದಲ್ಲಿ ಚಳಗೇರಿ ಟೋಲ್ನಾಕಾದಲ್ಲಿ ಗೇಟ್ ಹಾಕಿದ್ದರೂ ಸೈಡ್ ಗೆ ಹೋಗುವ ಬದಲು ಗೇಟ್ ಮೇಲೆ ತಾನೂ ತಲೆ ಭಾಗಿ ಹೋಗಿದ್ದಾನೆ. ಆದರೆ, ಹಿಂದೆ ಕುಳಿತ್ತಿದ್ದ ಪತ್ನಿ ಗಿರಿಜಮ್ಮಗೆ ಗೇಟ್ ಬಡಿದು ಕೆಳಗೆ ಬಿದ್ದಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ದಾವಣಗೆರೆ ಸಿಜೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿತ್ತಾದರೂ ಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.