ಪತ್ನಿ ಹತ್ಯಗೈದು ಶವ ಸುಟ್ಟ ಪತಿ

husband murder wife koppal kukanoor police arrest
Published on

ಕೊಪ್ಪಳ: ಕುಕನೂರು ತಾಲೂಕಿನ ಅರಕೇರಿ ಗ್ರಾಮದಲ್ಲಿ ಪತಿಯೊಬ್ಬ ಪತ್ನಿ ಶೀಲ ಶಂಕಿಸಿ ಕೊಲೆ ಮಾಡಿದ್ದಲ್ಲದೇ ಶವವನ್ನು ಶನಿವಾರ ಸುಟ್ಟು ಹಾಕಿದ್ದಾನೆ.

ಗ್ರಾಮದ ಗೀತಾ ಬಾವಿಕಟ್ಟಿ (25) ಕೊಲೆಯಾದಾಕೆ. ಈಕೆಯ ಪತಿ ದೇವರಡ್ಡೆಪ್ಪ ಬಾವಿಕಟ್ಟಿ ಕೊಲೆ ಮಾಡಿದಾತ. ಮಕ್ಕಳಗಾದ ಕಾರಣ ಪತ್ನಿ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾನೆ. ಇದೇ ವಿಷಯವಾಗಿ ಪತಿ&ಪತ್ನಿ ನಡುವೆ ಜಗಳ ನಡೆದಿದೆ. ಈ ವೇಳೆ ಕಟ್ಟಿಗೆಯಿಂದ ಮುಖಕ್ಕೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ. ವಿಷಯ ಮುಚ್ಚಿಟ್ಟು ತಂದೆ ಮಲ್ಲಾರಡ್ಡೆಪ್ಪನೊಂದಿಗೆ ಸೇರಿ ಶವವನ್ನು ಸ್ಮಶಾನಕ್ಕೆ ಕೊಂಡೊಯ್ದಿದ್ದಾರೆ. ಅಲ್ಲೇ ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾರೆ ಎಂದು ಮೃತಳ ಸಹೋದರ ಸಿದ್ದರೆಡ್ಡಿ ದೂರು ನೀಡಿದ್ದಾನೆ. ಕುಕನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net