ಅನೈತಿಕ ಸಂಬಂಧ ಶಂಕೆ: ಪತ್ನಿಗೆ ಚಾಕು ಇರಿದು ಠಾಣೆಗೆ ಬಂದ ವ್ಯಕ್ತಿ

Armugam 3 JAN 20
Published on

ಶಿವಮೊಗ್ಗ: ಅನೈತಿಕ ಸಂಬಂಧದ ಶಂಕೆಯಿಂದ ವ್ಯಕ್ತಿಯೊಬ್ಬ ಪತ್ನಿಗೆ ಚಾಕುವಿನಿಂದ ಇರಿದು ಪೊಲೀಸ್ ಠಾಣೆಗೆ ಹಾಜರಾಗಿರುವ ಘಟನೆ ಶಿವಮೊಗ್ಗದಲ್ಲಿ ಶುಕ್ರವಾರ ನಡೆದಿದೆ.

ಮಿಳಘಟ್ಟದ ಆರ್ಮುಗಂ ಚಾಕುವಿನಿಂದ ಇರಿದ ಆರೋಪಿಯಾಗಿದ್ದು, ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಪತ್ನಿ ಅಂಜಲಿಯನ್ನು ಖಾಸಗಿ ಆಸ್ಪತ್ರೆಗ ದಾಖಲಿಸಲಾಗಿದೆ.

ಘಟನೆ ವಿವರ: ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಅರಮನೆ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಆರ್ಮುಗಂ ತಿಂಗಳ ಹಿಂದೆ ತಮಿಳುನಾಡಿಗೆ ಹೋಗಿದ್ದ. ಶುಕ್ರವಾರ ವಾಪಾಸಾದ ಆರ್ಮುಗಂ ಬೆಳಗ್ಗೆ ಬಂದೊಡನೆ ಮನೆ ಬಾಗಿಲು ಹಾಕಿಕೊಂಡು ಪತ್ನಿ ಅಂಜಲಿಯೊಂದಿಗೆ ಜಗಳವಾಡಿದ್ದಾನೆ.

ಇದೇ ವೇಳೆ ಅಂಜಲಿ ತಂದೆ ಮನೆಗೆ ಬಂದಿದ್ದು‌ ಬಾಗಿಲು ಬಡಿದರೂ ಆರ್ಮುಗಂ ತೆಗೆದಿರಲಿಲ್ಲ. ಬಾಗಿಲು ಮುರಿದು ಒಳಗೆ ಹೋದಾಗ ಅಂಜಲಿ ರಕ್ತದ ಮಡುವಿನಲ್ಲಿ ಮಲಗಿದ್ದಳು. ಆರ್ಮುಗಂ ಪತ್ನಿ ಅಂಜಲಿಯ ಬೆನ್ನು, ಕೈಗೆ ಹಾಗೂ ಕಾಲಿಗೆ ಇರಿದಿದ್ದಾನೆ. ಈ ಘಟನೆಗೆ ಪತ್ನಿಯ ಮೇಲೆ ಸಂಶಯದಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಳಿಕ ಆರ್ಮುಗಂ ನೇರವಾಗಿ ದೊಡ್ಡಪೇಟೆ ಪೊಲೀಸ್ ಠಾಣೆಗೆ ಹೋಗಿ ಸರೆಂಡರ್ ಆಗಿದ್ದಾನೆ. 

....ಕೋಟ್.....

ಮಿಳಘಟ್ಟದಲ್ಲಿ ವ್ಯಕ್ತಿಯೊಬ್ಬ ಪತ್ನಿ ಮೇಲೆ ಸಂಶಯ ಪಟ್ಟು ಚಾಕು ಇರಿದಿದ್ದು, ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬದವರು ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುವುದು.

! ಕೆ.ಎಂ.ಶಾಂತರಾಜು, ಎಸ್ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net