ಗಂಡನ ಕೊಂದ ಪತ್ನಿ, ಪ್ರಿಯಕರನ ಬಂಧನ

01
Published on

ಗೋಕಾಕ: ಅನೈತಿಕ ಸಂಬಂಧ ಮುಚ್ಚಿಡಲು ಗಂಡನನ್ನೇ ಕೊಲೆ ಮಾಡಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಗೋಕಾಕ ಪೊಲೀಸರು ಮಂಗಳವಾರ ಬಂಧಿಸಿ ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪತ್ನಿ ಯಲ್ಲವ್ವ ಸನದಿ ಮತ್ತು ಆಕೆಯ ಪ್ರಿಯಕರ ವಿರೂಪಾಕ್ಷಿ ಮಠಪತಿ ಬಂಧನಕ್ಕೊಳಗಾದವರು. ಗೋಕಾಕ ತಾಲೂಕಿನ ಮೆಳವಂಕಿ ಗ್ರಾಮದಲ್ಲಿ ಅಪ್ಪಣ್ಣ ಸನದಿ (35) ಅವರ ಶವ ನಗರದ ಶೆಟ್ಟೆವ್ವನ ತೋಟದ ಹತ್ತಿರದ ಘಟಪ್ರಭಾ ನದಿಯಲ್ಲಿ ಕಳೆದ ಮಾ. 9ರಂದು ಪತ್ತೆಯಾಗಿತ್ತು. ಶವ ಪರಿಶೀಲಿಸಿದಾಗಲೇ ಪೊಲೀಸರಿಗೆ ಇದು ಹತ್ಯೆ ಪ್ರಕರಣ ಎಂಬ ಅನುಮಾನ ವ್ಯಕ್ತಪಡಿಸಿದ್ದರು.

ಈ ಬಗ್ಗೆ ದೂರು ಬಂದ ಬಳಿಕ ತನಿಖೆ ಕೈಗೊಂಡಿದ್ದ ಪೊಲೀಸರು, ಗಂಡನನ್ನೇ ಕೊಲೆ ಮಾಡಿಸಿದ ಪತ್ನಿ ಯಲ್ಲವ್ವ ಸನದಿ ಮತ್ತು ಸಮೀಪದ ಮೆಳವಂಕಿ ಗ್ರಾಮದ ಆಕೆಯ ಪ್ರಿಯಕರ ವಿರೂಪಾಕ್ಷಿ ಮಠಪತಿ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿರೂಪಾಕ್ಷಿ ಮತ್ತು ಯಲ್ಲವ್ವನ ಅನೈತಿಕ ಸಂಬಂಧ ಪತಿ ಅಪ್ಪಣ್ಣನಿಗೆ ಗೊತ್ತಾದ ಹಿನ್ನೆಲೆಯಲ್ಲಿ ಹೊಂಚು ಹಾಕಿ ಗದ್ದೆಯೊಂದರಲ್ಲಿ ಪತಿಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದರು.

ನಂತರ ಸಾಕ್ಷೃ ನಾಶಪಡಿಸುವ ಉದ್ದೇಶದಿಂದ ಶವವನ್ನು ನದಿಗೆ ಎಸೆದಿದ್ದಾಗಿ ವಿಚಾರಣೆ ಸಂದರ್ಭದಲ್ಲಿ ಬಂಧನಕ್ಕೊಳಗಾದವರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net