ಲಾರಿಗೆ ಬೈಕ್​ ಡಿಕ್ಕಿಯಾಗಿ ಪತಿ ಸಾವು, ಪತ್ನಿಗೆ ಗಾಯ

Published on

ಮುಳಬಾಗಿಲು: ಶ್ರೀನಿವಾಸಪುರ ರಸ್ತೆಯ ಕುರುಡುಮಲೆ ಕ್ರಾಸ್​ ಸಮೀಪದ ಗೋಪಾಲಪುರ ಗೇಟ್​ ಬಳಿ ಸೋಮವಾರ ಲಾರಿಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಪತಿ ಸ್ಥಳದಲೇ ಮೃತಪಟ್ಟಿದ್ದು, ಪತ್ನಿ ತೀವ್ರ ಗಾಯಗೊಂಡಿದ್ದಾರೆ. ಶಿಡ್ಲಘಟ್ಟ ಮೂಲದ ಬೈಕ್​ ಸವಾರ ಫೈರೋಜ್​ (40) ಮೃತ, ಪತ್ನಿ ಅಂಜುಮ್​ (37) ತೀವ್ರ ಗಾಯಗೊಂಡಿದ್ದಾರೆ. ಮುಳಬಾಗಿಲಿನ ಕುರುಬರುಪೇಟೆಯಲ್ಲಿರುವ ಪತ್ನಿ ಅಂಜುಮ್​ ಅವರ ಮನೆಗೆ ಬಂದು ವಾಪಸ್​ ಗಂಡನ ಮನೆಗೆ ಹೋಗುವಾಗ ಅಪಘಾತ ಸಂಭವಿಸಿದೆ. ಗಾಯಾಳು ಅಂಜುಮ್​ ಅವರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net